ರಾಷ್ಟ್ರೀಯ

2017ರೊಳಗೆ 20 ಸಾವಿರ ಮೆ.ವ್ಯಾ.ಸೋಲಾರ್ ವಿದ್ಯುತ್ : ಪಿಯುಷ್ ಗೋಯಲ್

Pinterest LinkedIn Tumblr

goನವದೆಹಲಿ, ಏ.3- ಮುಂಬರುವ 2017ರ ಒಳಗೆ 20 ಸಾವಿರ ಮೆ.ವ್ಯಾ. ಸೋಲಾರ್ (ಸೌರಶಕ್ತಿ) ವಿದ್ಯುತ್ ಉತ್ಪಾದನಾ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಕೇಂದ್ರ ಇಂಧನ ಸಚಿವ ಪಿಯುಷ್ ಗೋಯಲ್ ಹೇಳಿದ್ದಾರೆ.

20 ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆಗೆ 2022ರ ಗುರಿ ನೀಡಲಾಗಿದೆ. ಆದರೆ, ಪ್ರಧಾನಿ ಮೋದಿ ಅವರು ಈ ಗುರಿಯನ್ನು 1 ಲಕ್ಷ ಮೆ.ವ್ಯಾ.ಗೆ ನಿಗದಿಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮುಂಬೈ ವಿವಿಯಲ್ಲಿ ನಿನ್ನೆ ನಡೆದ ಸಮಾರಂಭವೊಂದರಲ್ಲಿ ಅವರು ಮಾತನಾಡಿದರು. ಈ ರೀತಿ ಹೆಚ್ಚಿನ ಗುರಿ ಸಾಧನೆ ನಿಗದಿಪಡಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯದ ವೇಗವನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Write A Comment