ರಾಷ್ಟ್ರೀಯ

ದೆಹಲಿ ಪೊಲೀಸ್‌ಗೆ ಲ್ಯಾಬ್ರಡಾರ್‌ ತಳಿಯ 30 ಶ್ವಾನಗಳ ಹೊಸ ತಂಡ ಸೇರ್ಪಡೆ

Pinterest LinkedIn Tumblr

dogನವದೆಹಲಿ, ಏ.3- ವಿಶೇಷವಾಗಿ ತರಬೇತಿ ನೀಡಲಾಗಿರುವ ಲ್ಯಾಬ್ರಡಾರ್ ತಳಿಯ 30 ಶ್ವಾನಗಳ ಹೊಸ ತಂಡವೊಂದು ದೆಹಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳಲಿವೆ.

ವಿಶೇಷ ತರಬೇತಿ ಪಡೆದ ಈ 30 ನಾಯಿಗಳ ಪೈಕಿ 20 ವಾಸನೆ ಹಿಡಿಯುವ ಎಕ್ಸ್‌ಪರ್ಟ್‌ಗಳಾಗಿದ್ದು, ಉಳಿದ 10 ನಾಯಿಗಳು ಅಡಗಿಸಿಟ್ಟಿದ್ದ ವಸ್ತುಗಳ ಪತ್ತೆ ಮಾಡುವ ನೈಪುಣ್ಯ ಸಾಧಿಸಿವೆ. ಈ ಎಲ್ಲ 30 ಶ್ವಾನಗಳು ಸದ್ಯ ಒಂದೂವರೆ ವರ್ಷ ಹರೆಯದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ಪಶು ಇಲಾಖೆ ವೈದ್ಯರು ಹಾಗೂ ಸೇನಾಧಿಕಾರಿಗಳು ಈ 30 ನಾಯಿಗಳನ್ನು ತಪಾಸಣೆ ನಡೆಸಿ ಅರ್ಹತಾ ಪತ್ರ ನೀಡಿದ್ದರು. ಇಲಾಖೆಗೆ ಸೇರ್ಪಡೆಯಾಗಲಿರುವ ಈ 30 ಯುವ ನಾಯಿಗಳನ್ನೂ ಹೆಚ್ಚಿನ ತರಬೇತಿಗೆ ಕಳುಹಿಸಿಕೊಡಲಾಗುವುದು. ಮೊದಲು ಲ್ಯಾಬ್ರಡಾರ್ ಮತ್ತು ಜರ್ಮನ್ ಷಫರ್ಡ್ ಮಿಶ್ರತಳಿಯ ನಾಯಿಗಳ ಸೇರ್ಪಡೆ ಮಾಡುವ ಯೋಜನೆಯಿತ್ತು. ಆದರೆ, ತರಬೇತುದಾರರು ಲ್ಯಾಬ್ರಡಾರ್‌ಗಳನ್ನೇ ಶಿಫಾರಸು ಮಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Write A Comment