ರಾಷ್ಟ್ರೀಯ

ಬಂಧನದಲ್ಲಿದ್ದ ನಾಲ್ವರು ಭಾರತೀಯ ಯುವಕರನ್ನು ಬಿಡುಗಡೆ ಮಾಡಿದ ಸಿರಿಯಾ…

Pinterest LinkedIn Tumblr

maನವದೆಹಲಿ, ಏ.3- ಸಿರಿಯಾ ಸರ್ಕಾರದ ಬಂಧನದಲ್ಲಿದ್ದ ನಾಲ್ವರು ಭಾರತೀಯರನ್ನು ಬಿಡುಗಡೆ ಮಾಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳಲು ಹೊರಟಿದ್ದ ನಾಲ್ವರು ಭಾರತೀಯರನ್ನು ಕಳೆದ ಜನವರಿಯಲ್ಲಿ ಸಿರಿಯಾ ಪೊಲೀಸರು ಬಂಧಿಸಿದ್ದರು. ಅವರನ್ನು ಬಂಧಮುಕ್ತ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಐಎಸ್ ಸಂಘಟನೆಗೆ ಸೇರಲು ಭಾರತದ ಹಿಂದೂ ಯುವಕರಾದ ಅರುಣ್‌ಕುಮಾರ್ ಸೈನಿ, ಸರ್ವಜಿತ್‌ಸಿಂಗ್, ಕುಲ್‌ದೀಪ್‌ಸಿಂಗ್ ಹಾಗೂ ಜೋಗಾಸಿಂಗ್ ಸಿರಿಯಾಕ್ಕೆ ತೆರಳಿದ್ದಾಗ ಆ ಸರ್ಕಾರ ಅವರನ್ನು ಬಂಧಿಸಿತ್ತು.ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಸಿರಿಯ ಉಪ ಪ್ರಧಾನಿಯನ್ನು ಕೇಳಿಕೊಂಡಿದ್ದೆ. ಅವರು ಅದಕ್ಕೆ ಸ್ಪಂದಿಸಿ ಬಿಡುಗಡೆ ಮಾಡಿದ್ದಾರೆ ಎಂದು ಸ್ವರಾಜ್ ಹೇಳಿದ್ದಾರೆ.

Write A Comment