ಕರ್ನಾಟಕ

ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಪರಾರಿಯಾಗಿದ್ದ ಕಾಮುಕರ ಬಂಧನ

Pinterest LinkedIn Tumblr

rapeತುಮಕೂರು,ಏ.3-ಬಾಲಕಿಯೊಬ್ಬಳಿಗೆ ಮತ್ತು ಬರುವ ಜ್ಯೂಸ್ ನೀಡಿ ಸಾಮೂಹಿಕವಾಗಿ ಅತ್ಯಾಚಾರ ವೆಸಗಿ ಪರಾರಿಯಾಗಿದ್ದ ಇಬ್ಬರು ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಯುವತಿಯೊಬ್ಬಳನ್ನು ತಿಪಟೂರು ಗ್ರಾಮಾಂತರ ಠಾಣೆಯ ವಿಶೇಷ ಪೊಲೀಸ್ ತಂಡ ಯಶಸ್ವಿಯಾಗಿದೆ. ನೊಣವಿನಕೆರೆ ಸಮೀಪದ ರಂಗಯ್ಯನಹಳ್ಳಿಯ ಲೋಕೇಶ್(22), ರೇಣುಕ(23), ಲಾವಣ್ಯ ಬಂಧಿತರು. ಕಳೆದ 24ರಂದು ನೊಣವಿನಕೆರೆ ಗ್ರಾಮದ ಬಾಲಕಿಯೊಬ್ಬಳನ್ನು ಸ್ನೇಹಿತೆ ಲಾವಣ್ಯ ಪುಸಲಾಯಿಸಿ ಸ್ನೇಹಿತರು ಬಂದಿದ್ದಾರೆ. ಮಾತನಾಡಿಸಿಕೊಂಡು ಬರೋಣ ಎಂದು ಹೇಳಿ, ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಗೆ ಕರೆದೊಯ್ದಿದ್ದರು.

ಅಲ್ಲಿದ್ದ ಕೀಚಕರಾದ ಲೋಕೇಶ್ ಮತ್ತು ರೇಣುಕ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದರು ಎನ್ನಲಾಗಿದೆ. ಸಂಜೆಯಾದರೂ ಬಾಲಕಿ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿದ್ದು, 25ರಂದು ಬೆಳಗ್ಗೆ ರಸ್ತೆಬದಿಯಲ್ಲಿ ನಿತ್ರಾಣವಾಗಿ ಬಿದ್ದಿದ್ದಳು. ಇದನ್ನು ಗಮನಿಸಿದ ಸಾರ್ವಜನಿಕರು ಆಕೆಯನ್ನು ಮನೆಗೆ ಸೇರಿಸಿದರು. ಈ ವಿಷಯ ತುಮಕೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ತಿಳಿದಿದ್ದು, ಅವರು ಹೋಗಿ ಬಾಲಕಿಯನ್ನು ವಿಚಾರಿಸಿದಾಗ ಆಕೆ ನನಗೇನು ನೆನಪಿಲ್ಲ. ಮತ್ತು ಬರುವ ಔಷಧಿ ನೀಡಿದ್ದರು ಎಂದು ಹೇಳಿದ್ದಾಳೆ. ನಂತರ ಲಾವಣ್ಯಾಳನನ್ನು ವಿಚಾರಣೆ ನಡೆಸಿ ಗ್ರಾಮಾಂತರ ಠಾಣೆಗೆ ವಿವರ ನೀಡಿದ್ದಾರೆ.

ಈ ಸಂಬಂಧ ತಿಪಟೂರು ಗ್ರಾಮಾಂತರ ಸಿಪಿಐ ರಮೇಶ್ ಲಾವಣ್ಯಾಳನ್ನು ವಿಚಾರಣೆ ನಡೆಸಿ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಾರ್ತಿಕ್ ರೆಡ್ಡಿ ಅವರಿಗೆ ಸಲ್ಲಿಸಿದ್ದು, ವರದಿಯನ್ನು ಅವಲೋಕಿಸಿದ ಎಸ್‌ಪಿಯವರು ಡಿವೈಎಸ್ಪಿ ರವಿಕುಮಾರ್ ಹಾಗೂ ತಿಪಟೂರು ಗ್ರಾಮಾಂತರ ಸಿಬ್ಬಂದಿಯನ್ನೊಳಗೊಂಡಂತೆ ವಿಶೇಷ ತಂಡವನ್ನು ರಚಿಸಿದ್ದು, ಇಂದು ಬೆಳಗ್ಗೆ ತೋಟದಲ್ಲಿ ಮನೆಯಲ್ಲಿ ಲೋಕೇಶ್ ಮತ್ತು ರೇಣುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment