ಗಲ್ಫ್

ಸೌದಿ ಅರೇಬಿಯಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

modiiiii

ರಿಯಾಧ್: ತೈಲ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಚೊಚ್ಚಲ ಪ್ರವಾಸದಲ್ಲಿ 2 ದಿನಗಳ ಭೇಟಿ ಸಲುವಾಗಿ ರಿಯಾಧ್​ಗೆ ಆಗಮಿಸಿದ್ದಾರೆ.

ರಿಯಾದ್ ಗವರ್ನರ್ ರಾಜಕುಮಾರ ಫೈಸಲ್ ಬಿನ್ ಬಂದರ್ ಬಿನ್ ಅಬ್ದುಲಾಜೀಜ್ ಅವರು ಮೋದಿ ಅವರನ್ನು ಸ್ವಾಗತಿಸಿದರು. ಎರಡು ದಿನಗಳ ಈ ಭೇಟಿ ಕಾಲದಲ್ಲಿ ಉಭಯ ರಾಷ್ಟ್ರಗಳು ಭದ್ರತೆ ವಿಸ್ತರಣೆ ಹಾಗೂ ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಮಹತ್ವದ ಪಾಲುದಾರಿಕೆ ಮಾರ್ಗಗಳ ಬಗ್ಗೆ ಚರ್ಚಿಸಲಿವೆ.

ಮೋದಿ ಮತ್ತು ಸೌದಿ ಅರೇಬಿಯಾ ನಾಯಕತ್ವದ ನಡುವಣ ಮಾತುಕತೆಯಲ್ಲಿ ಉಗ್ರವಾದದ ಬೆದರಿಕೆಯ ನಿಗ್ರಹ ಮತ್ತು ಬಾಂಧವ್ಯ ಸುಧಾರಣೆ ಪ್ರಮುಖವಾಗಿ ಪ್ರಸ್ತಾಪಗೊಳ್ಳುವ ನಿರೀಕ್ಷೆ ಇದೆ. ಇಸ್ಲಾಮ್ ಆಧ್ಯಾತ್ಮಿಕ ನೆಲೆ ಎಂದೇ ಪರಿಚಿತವಾರುವ ಸೌದಿ ಅರೇಬಿಯಾವು ಇತ್ತೀಚೆಗೆ ಭಯೋತ್ಪಾದನೆ ಅದರಲ್ಲೂ ನಿರ್ದಿಷ್ಟವಾಗಿ ಐಸಿಸ್ ವಿರುದ್ಧ ಸಮರಕ್ಕಾಗಿ 34 ಮುಸ್ಲಿಮ್ ರಾಷ್ಟ್ರಗಳ ಒಕ್ಕೂಟವನ್ನು ರಚಿಸಿತ್ತು.

ಕಳೆದ ಎರಡು ದಶಕಗಳಲ್ಲಿ ತೈಲ ಉತ್ಪಾದಕ ರಾಷ್ಟಗಳಾದ ಭಾರತ ಮತ್ತು ಸೌದಿ ಅರೇಬಿಯಾ ಬಾಂಧವ್ಯ ವರ್ಧಿಸಿದೆ. ಇಂಧನ ಕ್ಷೇತ್ರವಲ್ಲದೆ, ರಿಫೈನರಿ ಮತ್ತು ತೈಲ ಕ್ಷೇತ್ರಗಳಲ್ಲಿ ಜಂಟಿ ಸಾಹಸ ನಿಟ್ಟಿನಲ್ಲಿ ಮುಂದೆ ಸಾಗಲೂ ಉಭಯ ರಾಷ್ಟ್ರಗಳೂ ಗಮನ ಹರಿಸಿವೆ.

Write A Comment