ಮನೋರಂಜನೆ

4 ವರ್ಷಗಳ ನಂತರ ಮತ್ತೆ ಒಂದಾದ ಸಲ್ಮಾನ್ ಖಾನ್ : ಕತ್ರಿನಾ ಕೈಫ್

Pinterest LinkedIn Tumblr

salman-katrina

ಸಂಬಂಧ ಮುರಿದು ಬಿದ್ದು ಹಲವು ವರ್ಷಗಳ ನಂತರ ಬಾಲಿವುಡ್ ಲವ್ಲಿ ಜೋಡಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮತ್ತೆ ಬೆಳ್ಳಿ ಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ನಟ ರಣಬೀರ್ ಕಪೂರ್ ಜೊತೆಗಿನ ಸಂಬಂಧ ಮುರಿದು ಬಿದ್ದ ನಂತರ ಕತ್ರಿನಾ ಕೈಫ್ ತಮ್ಮ ಮಾಜಿ ಪ್ರಿಯಕರ ಸಲ್ಲುಗೆ ಮತ್ತಷ್ಟು ಹತ್ತಿರವಾಗಿದ್ದು, ಇತ್ತೀಚಿಗೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಮೂಲಕ ಹಲವು ಹೊಸ ಪ್ರತಿಭಾವಂತ ನಟರಿಗೆ ಗಾಡ್ ಫಾದರ್ ಎಂದೇ ಬಾಲಿವುಡ್ ನಲ್ಲಿ ಖ್ಯಾತಿಯಾಗಿರುವ ಸಲ್ಮಾನ್ ಈಗ ಮತ್ತೆ ತಮ್ಮ ಮಾಜಿ ಪ್ರಿಯತಮಗೆ ತಮ್ಮ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ಮೂಲಗಳನ್ನೆ ನಂಬುವುದಾದರೆ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಹಳೆಯದ್ದನ್ನೆಲ್ಲಾ ಮರೆತು ಈಗ ಮತ್ತೆ ಒಂದಾಗಿದ್ದಾರೆ. ಇದರ ಪ್ರತಿಫಲವೇ ನಾಲ್ಕು ವರ್ಷಗಳ ನಂತರ ಸಲ್ಲು ಜೊತೆ ನಟಿಸಲು ಕೈಫ್ ಸಹಿ ಹಾಕಿದ್ದಾರೆ. ಅಲ್ಲದೆ ಇಬ್ಬರೂ ಕಾಫೀ ವಿತ್ ಕರನ್ 5ರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಲು ಹಾಗೂ ಕತ್ರಿನಾ ಜೋಡಿ ಹೊಸ ಚಿತ್ರ ಕರಣ್ ಜೋಹರ್ ಬ್ಯಾನರಿನಡಿ ನಿರ್ಮಾಣವಾಗುತ್ತಿದೆ.

ಏಕ್ ಥಾ ಟೈಗರ್, ಯುವರಾಜ್, ಪಾರ್ಟನರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಸಲ್ಲು ಜೊತೆ ಕತ್ರಿನಾ ನಟಿಸಿದ್ದಾರೆ.

Write A Comment