ಕರ್ನಾಟಕ

ಬೆಂಗಳೂರಿನಿಂದ ಹುಬ್ಬಳ್ಳಿಗೆ ಟಿಕೆಟ್ ರಹಿತ ರೈಲು ಪ್ರಯಾಣಕ್ಕೆ 200 ಮಂದಿಯಿಂದ ಬೇಡಿಕೆ

Pinterest LinkedIn Tumblr

railwaystation

ಬೆಂಗಳೂರು: ಗುರುವಾರ ರಾತ್ರಿ ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಹುಬ್ಬಳ್ಳಿ ಮೂಲದ 200 ಮಂದಿ ಪ್ರಯಾಣಿಕರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವುದಾಗಿ ಒತ್ತಾಯ ಮಾಡಿದಂತ ಘಟನೆ ನಡೆದಿದೆ.

ರಾತ್ರಿ 10 ಘಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಬೇಕಿದ್ದ ಫ್ಲಾಟ್ ಫಾರ್ಮ್ 10ರಲ್ಲಿ ಸುಮಾರು 8 ಗಂಟೆ ಸುಮಾರಿಗೆ 200 ಮಂದಿ ಪ್ರಯಾಣಿಕರು ಬಂದು ತಾವು ಪುರಸಭೆ ಸಿಬ್ಬಂದಿ ಹಾಗೂ ಕೆಳ ಸಮುದಾಯದವರು ನಮಗೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡಿ ಎಂದು ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಿದರು.

ಇದಕ್ಕೆ ರೈಲ್ವೇ ಅಧಿಕಾರಿಗಳು ಸಮ್ಮತಿಸದೆ ರೈಲು ಟಿಕೆಟ್ ಪಡೆದವರಿಗೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಿದರು. ಈ ವೇಳೆ ಯಾವುದೇ ಕಾರಣಕ್ಕೂ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಲು ಸಾಧ್ಯವಿಲ್ಲ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜೀವ್ ಅಗರವಾಲ್ ಅವರು ಹೇಳಿದರು.

ಟಿಕೆಟ್ ರಹಿತ ಪ್ರಯಾಣ ಅನುಮತಿಗಾಗಿ ಕೆಲವೊಂದು ಗುಂಪುಗಳು ಒತ್ತಾಯಿಸುವೆ. ಅಂತಹ ಒತ್ತಾಯಕ್ಕೆ ಮಣಿದರೆ ರೈಲ್ವೆ ಸಂಸ್ಥೆ ನಷ್ಟ ಅನುಭವಿಸಬೇಕಾಗುತ್ತದೆ. ಇದಾಗಲೇ ಟಿಕೆಟ್ ದರವನ್ನು ಶೇ. 50ರಷ್ಟು ಕಡಿಮೆ ಮಾಡಲಾಗಿದೆ. ಈಗಿದ್ದರೆ ಕೆಲ ಗುಂಪುಗಳು ಟಿಕೆಟ್ ಇಲ್ಲದೆ ಪ್ರಯಾಣಕ್ಕೆ ಒತ್ತಾಯಿಸುತ್ತವೆ ಎಂದರು.

Write A Comment