Uncategorized

ಏ.4 ರಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಮೆಹಬೂಬಾ ಮುಫ್ತಿ ಪ್ರಮಾಣ ವಚನ

Pinterest LinkedIn Tumblr

Mehabooba Mufti

ಶ್ರೀನಗರ: ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಏ.4 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕದ ಬಗ್ಗೆ ಪಿಡಿಪಿ ನಾಯಕ ಅಮಿತಾಬ್ ಮಟ್ಟು ಮಾಹಿತಿ ನೀಡಿದ್ದು, ಪಿಡಿಪಿ- ಬಿಜೆಪಿ ನಾಯಕರು ಪದಗ್ರಹಣ ಸಮಾರಂಭದ ಬಗ್ಗೆ ರಾಜ್ಯಪಾಲ ಎನ್ಎನ್ ವೋಹ್ರಾ ಅವರಿಗೆ ಈಗಾಗಲೇ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತಾಬ್ ಮಟ್ಟು ಮೆಹಬೂಬಾ ಮುಫ್ತಿ ಉತ್ತಮ ಅಡಳಿತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾ.26 ರಂದು ಪಿಡಿಪಿ-ಬಿಜೆಪಿ ನಾಯಕರು ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ರಚಿಸಲು ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದರು. ಮುಫ್ತಿ ಮೊಹಮ್ಮದ್ ಸಯೀದ್ ನಿಧನದ ನಂತರ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿತ್ತು.

Write A Comment