ಮನೋರಂಜನೆ

ಕೊಹ್ಲಿ ತೆಕ್ಕೆಗೆ ಮರಳಿ ಬಂದ ಅನುಷ್ಕಾ! ಸೆಮಿಫೈನಲ್ ಸೋತು ಬೇಸರದಲ್ಲಿದ್ದ ಕೊಹ್ಲಿಯನ್ನು ಸಮಾಧಾನ ಮಾಡಿದ ಅನುಷ್ಕಾ

Pinterest LinkedIn Tumblr

virat

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರಾಭವಗೊಂಡ ಬೇಸರ ಕ್ರಿಕೆಟ್ ಪ್ರೇಮಿಗಳದ್ದು. ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ವರೆಗೆ ಉತ್ತಮ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಗುರುವಾರ ವೆಸ್ಟ್ ಇಂಡೀಸ್‌ನಿಂದ ಪರಾಭವಗೊಂಡಾಗ ಅತೀವ ಬೇಸರದಿಂದ ಮೈದಾನದಲ್ಲೇ ಕೆಲ ಕಾಲ ನಿಂತಿದ್ದರು. ಕೊಹ್ಲಿಯ ಮುಖದಲ್ಲಿ ಆ ನೋವು, ಬೇಸರ ಎದ್ದು ಕಾಣುತ್ತಿತ್ತು. ಪಂದ್ಯ ಸೋತ ನಂತರ ಭಾರವಾದ ಹೆಜ್ಜೆ ಹಾಕಿ ಹೋಟೆಲ್ ರೂಂಗೆ ತೆರಳಿದ ಕೊಹ್ಲಿ ಅಲ್ಲಿ ಯಾರಿಗೂ ಕಾಣಿಸದಂತೆ ಕಣ್ಣೀರು ಹಾಕಿದ್ದರು.

ಇಷ್ಟೆಲ್ಲಾ ಕಷ್ಟಪಟ್ಟು ಕೊನೆಯ ಹಂತದಲ್ಲಿ ಪಂದ್ಯ ಕೈಜಾರಿ ಹೋಯಿತಲ್ಲಾ ಎಂದು ದುಃಖಿಸುತ್ತಿರುವ ಹೊತ್ತಲ್ಲೇ ಅನುಷ್ಕಾ ಕರೆ ಮಾಡಿದ್ದಾಳೆ. ಹೀಗೆ ಕರೆ ಮಾಡಿದ ಅನುಷ್ಕಾ ಸುಮಾರು ಒಂದು ಗಂಟೆಗಳ ಕಾಲ ಕೊಹ್ಲಿ ಜತೆ ಮಾತನಾಡಿ ಆತನನ್ನು ಸಮಾಧಾನಿಸಿದ್ದಾಳೆ.

ಈ ಫೋನ್ ಕರೆಯ ನಂತರ ಕೊಹ್ಲಿ ಸ್ವಲ್ಪ ಸುಧಾರಿಸಿಕೊಂಡವರಂತೆ ಕಂಡು ಬಂತು ಎಂದು ಆತನ ರೂಂಮೇಟ್ ಹರ್ಭಜನ್ ಸಿಂಗ್ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.

ವಿಷಯ ಇಷ್ಟೇ ಅಲ್ಲ, ಕೊಹ್ಲಿಯ ಮನಸ್ಸನ್ನು ಅರಿತ ಅನುಷ್ಕಾ ಶುಕ್ರವಾರ ಬೆಳಗ್ಗೆಯೇ ಕೊಹ್ಲಿ ತಂಗಿರುವ ಹೋಟೆಲ್‌ಗೆ ಬಂದಿದ್ದಾಳೆ. ಪಂಜಾಬ್ ನಲ್ಲಿ ಸಲ್ಮಾನ್ ಖಾನ್ ಜತೆ ಸುಲ್ತಾನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಅನುಷ್ಕಾ, ಕೊಹ್ಲಿಯನ್ನು ಭೇಟಿ ಮಾಡಲೆಂದೇ ಬೆಳ್‌ಬೆಳಗ್ಗೆ ಪಂಜಾಬ್‌ನಿಂದ ಮುಂಬೈಗೆ ಬಂದಿದ್ದಳು.

ಪ್ರತೀ ಮ್ಯಾಚ್‌ನಲ್ಲಿಯೂ ಪ್ರದರ್ಶನ ಉತ್ತಮವಾಗಿದ್ದರೂ, ಕೆಟ್ಟದಾಗಿದ್ದರೂ ಅನುಷ್ಕಾಳ ಮೇಲೆ ಗೂಬೆ ಕೂರಿಸುವವರ ವಿರುದ್ಧ ಕೊಹ್ಲಿ ಗುಡುಗಿದ್ದೇ ತಡ, ಇವರಿಬ್ಬರೂ ಒಂದಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈಗ ಆ ಸುದ್ದಿ ನಿಜವಾಗಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮೆಲ್ಲಾ ಮುನಿಸುಗಳನ್ನು ಬದಿಗೆ ತಳ್ಳಿ ಮತ್ತೆ ಒಂದಾಗಿದ್ದಾರೆ.

(ಈ ಸುದ್ದಿ ಓದಿದ್ದಕ್ಕೆ ಥ್ಯಾಂಕ್ಸ್…ಏಪ್ರಿಲ್ ಫೂಲ್ )(ಕನ್ನಡಪ್ರಭ)

Write A Comment