ಕರ್ನಾಟಕ

ಇಂದಿನಿಂದ ಬೆಲೆ ಏರಿಕೆ ಬಿಸಿ: ಯಾವ್ಯಾವುದು ದುಬಾರಿ?

Pinterest LinkedIn Tumblr

PRICEHIKE

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಬಜೆಟ್ ನ ಘೋಷಣೆಗಳು ಇಂದಿನಿಂದ ಅನುಷ್ಠಾನಕ್ಕೆ ಬರಲಿದ್ದು, ಜನಸಾಮನ್ಯರ ದೈನಂದಿನ ಖರ್ಚು-ವೆಚ್ಚಗಳು ಹೆಚ್ಚಾಗಲಿದೆ.

ಹೋಟೆಲ್ ಊಟ, ಬಿಲ್ ಪಾವತಿ, ಸಿಗರೇಟು, ಬ್ರ್ಯಾಂಡೆಡ್ ಬಟ್ಟೆಗಳು, ಪೆಟ್ರೋಲ್, ಡೀಸೆಲ್, ತಂಪು ಪಾನೀಯ, ವಿದ್ಯುತ್ ದರ, ಆಸ್ತಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಮದ್ಯ, ಭೂದಾನ, ಭೂಗುತ್ತಿಗೆ, ಕಾರು, ಪೋನ್, ಕೋಕ್ ಸೇರಿದಂತೆ ಹಲವು ಉತ್ಪನ್ನ ಸೇವೆಗಳ ಬೆಲೆಯಲ್ಲಿ ಹೆಚ್ಚಳ ಆಗಲಿದೆ.

ಕೇಬಲ್ ಟಿವಿ ಮತ್ತು ಖಾಸಗಿ ಬಸ್ ಸೇವೆಗಳ ಬೆಲೆಯಲ್ಲಿ ಹೆಚ್ಚಳ ಆಗಲಿದೆ. ಆದರೆ ಇದರ ಪ್ರಮಾಣ ಎಷ್ಟು ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆ, ವಿಮಾನ ಯಾನ ತುಸು ದುಬಾರಿಯಾಗಲಿದ್ದು, ಈ ಮಾರಾಟ ತೆರಿಗೆ ಜೂನ್ 1ರಿಂದ ಜಾರಿಗೆ ಬರಲಿದೆ.

ಇಂದಿನಿಂತ ವಿದ್ಯುತ್ ಪ್ರತಿ ಯೂನಿಟ್ ಗೆ 30 ರಿಂದ 50 ಪೈಸೆ ಹೆಚ್ಚುವರಿ ದರ ಪಾವತಿಸಬೇಕಿದೆ. ಕೆಲವು ಡೀಸೆಲ್ ಕಾರುಗಳ ಮೇಲೆ ಶೇ.2.5ರಷ್ಟು ಮೂಲಸೌಕರ್ಯ ಮಾರಾಟ ತೆರಿಗೆ ಹೆಚ್ಚಿಸಲಾಗಿದೆ.

ಯಾವುದು ದುಬಾರಿ?
ಮಾರಾಟ ತೆರಿಗೆಯನ್ನು ಶೇಕಡ 30 ಕ್ಕೆ ಹೆಚ್ಚಿಸಿದ ಹಿನ್ನಲೆಯಲ್ಲಿ- ಪೆಟ್ರೋಲ್ ಪ್ರತಿ ಲೀಟರ್ ಗೆ ರು.1.89 ಹೆಚ್ಚಳ
ಅಬಕಾರಿ ಸುಂಕ ಹೆಚ್ಚಳವಾದ ಹಿನ್ನಲೆಯಲ್ಲಿ- ಡೀಸೆಲ್ ಪ್ರತಿ ಲೀಟರ್ ಗೆ ರು.0.98
ಅಬಕಾರಿ ಸುಂಕ ಹೆಚ್ಚಳವಾದ ಹಿನ್ನಲೆಯಲ್ಲಿ- ಮದ್ಯ 180 ಎಂಎಲ್ ಗೆ ರು.4 ಹೆಚ್ಚಳ
ಅಬಕಾರಿ ಸುಂಕ ಹೆಚ್ಚಳವಾದ ಹಿನ್ನಲೆಯಲ್ಲಿ- ಬಿಯರ್ 650 ಎಂ ಎಲ್ ಗೆ ರು.7ರಿಂದ 9 ಹೆಚ್ಚಳ
ವ್ಯಾಟ್ ಶೇ.20ಕ್ಕೆ ಹೆಚ್ಚಿಸಿದ ಹಿನ್ನಲೆಯಲ್ಲಿ -ತಂಪು ಪಾನೀಯ 200 ಎಂ ಎಲ್ ಗೆ ರು.1 ಹೆಚ್ಚಳ
ಮುದ್ರಾಂಕ ಶುಲ್ಕ ಹೆಚ್ಚಳವಾದ ಹಿನ್ನಲೆಯಲ್ಲಿ ಕುಟುಂಬ ಸದಸ್ಯರಿಗೆ ಆಸ್ತಿ ಉಡುಗೊರೆ-ನಗರ ಪ್ರದೇಶದಲ್ಲಿ ಪ್ರತಿ ವಹಿವಾಟಿಗೆ ರು.5,000 ಏರಿಕೆ
ಆಸ್ತಿ ಮಾರ್ಗಸೂಚಿ ಮೌಲ್ಯ ಹೆಚ್ಚಳವಾದ ಹಿನ್ನಲೆಯಲ್ಲಿ ಆಸ್ತಿ ಖರೀದಿ ದುಬಾರಿಯಾಗಿ, ಪ್ರದೇಶವಾರು ಹೆಚ್ಚಳ
ವಿದ್ಯುತ್, ಬೆಸ್ಕಾಂ ನಲ್ಲಿ ಪ್ರತಿ ಯೂನಿಟ್ ಗೆ 48 ಪೈಸೆ ಹೆಚ್ಚಳ
ಡಿಟಿಎಚ್ ಮತ್ತು ಎಂಎಸ್ ಒ-ಶೇ.4ರಿಂದ ಶೇ.10ಕ್ಕೆ ಹೆಚ್ಚಳ
ಖಾಸಗಿ ಬಸ್- ಒಂದು ಸೀಟಿಗೆ 3 ತಿಂಗಳಿಗೆ ಇದ್ದ ತೆರಿಗೆ ರು. 2,700 ರಿಂದ ರು. 3,500ಗೆ ಏರಿಕೆ

Write A Comment