ಮನೋರಂಜನೆ

‘ಪೋಪ್ ಜೊತೆಗೆ ಸಂಬಂಧ’ ಟ್ವೀಟ್ ನಿಂದ ಕಾನೂನು ತೊಡಕಿಗೆ ಸಿಲುಕಿದ ಹೃತಿಕ್

Pinterest LinkedIn Tumblr

Hrithik Roshan

ನವದೆಹಲಿ: ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಪೋಪ್ ಮೇಲೆ ಮಾಡಿರುವ ಟ್ವೀಟ್ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ದೂರಿ ಮುಂಬೈ ನ ಕ್ರಿಶ್ಚಿಯನ್ ಜಾತ್ಯಾತೀತ ಸಮಿತಿ ನಟನಿಗೆ ಕಾನೂನು ನೋಟಿಸ್ ಜಾರಿ ಮಾಡಿದೆ.

ಮಾರ್ಚ್ ೨೮ ರಂದೇ ನೋಟಿಸ್ ಕಳುಹಿಸಿದ್ದರು, ನಟ ನೆನ್ನೆಯಷ್ಟೇ ಅದನ್ನು ಪಡೆದಿದ್ದಾರೆ ಎಂದು ಕ್ರಿಶ್ಚಿಯನ್ ಜಾತ್ಯಾತೀತ ಸಮಿತಿಯ ಅಬ್ರಹಾಂ ಮಿಥಾಯ್ ಹೇಳಿದ್ದರೆ.

ಆದರೆ ಸುದ್ದಿ ವಾಹಿನಿಯೊಂದರ ಪ್ರಕಾರ, ಹೃತಿಕ್ ವಕೀಲ ತಿಳಿಸಿರುವಂತೆ ನಟ ಇನ್ನು ಯಾವುದೇ ನೋಟಿಸ್ ಪಡೆದಿಲ್ಲ, ಆದರೆ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಾದರೆ ಕ್ಷಮೆ ಕೋರಲು ಅವರು ಸಿದ್ಧರಿದ್ದಾರೆ ಎನ್ನಲಾಗಿದೆ.

ಹೃತಿಕ, ತಮ್ಮ ಗೆಳತಿ ಕಂಗನಾ ರನೌತ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದ ಸಂದರ್ಭದಲ್ಲಿ “ಮಾಧ್ಯಮಗಳು ಮಹಿಳೆಯ (ಅವರು ಅದ್ಭುತ ಮಹಿಳೆ ಎಂದು ನನಗೆ ತಿಳಿದಿದೆ) ನನ್ನ ಹೆಸರು ಬೆಸೆಯುತ್ತಿರುವ ಸಮಯದಲ್ಲಿ ಅವರ ಜೊತೆಗೆ ಅಫೇರ್ ಇಟ್ಟುಕೊಳ್ಳುವುದಕ್ಕಿಂತಲೂ ಪೋಪ್ ಜೊತೆಗೆ ಅಫೇರ್ ಬೆಳೆಸುವುದಕ್ಕೆ ಹೆಚ್ಚು ಸಾಧ್ಯತೆಯಿದೆ” ಎಂದು ಜನವರಿ ೨೮ರಂದು ಟ್ವೀಟ್ ಮಾಡಿದ್ದರು.
ಎರಡು ವಾರಗಳ ಹಿಂದೆಯಷ್ಟೇ ಹೃತಿಕ್ ಮತ್ತು ಕಂಗನ ಪರಸ್ಪರ ಟೀಕೆ ಮಾಡಿಕೊಂಡು, ಕಾನೂನು ನೋಟಿಸ್ ಗಳನ್ನು ಜಾರಿ ಮಾಡಿಕೊಂಡಿದ್ದರು.

Write A Comment