ರಾಷ್ಟ್ರೀಯ

`ತಿಥಿ’ ಅತ್ಯುತ್ತಮ ಪ್ರಾದೇಶಿಕ ಚಿತ್ರ

Pinterest LinkedIn Tumblr

filmನವದೆಹಲಿ, ಮಾ. ೨೮- ಕನ್ನಡಮುಖಪುಟ ರಾಷ್ಟ್ರೀಯ `ತಿಥಿ’ ಅತ್ಯುತ್ತಮ ಪ್ರಾದೇಶಿಕ ಚಿತ್ರದ `ತಿಥಿ’ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಕನ್ನಡಿಗ ರಾಮರೆಡ್ಡಿ ಅವರ ನಿರ್ದೇಶನದ ಈ ಚಿತ್ರ ಇದಕ್ಕೆ ಮುನ್ನ ಲೊ ಕಾರ್ನೋ ಚಿತ್ರೋತ್ಸವದಲ್ಲಿ 2 ಪ್ರಶಸ್ತಿಗಳನ್ನು ಗೆದ್ದಿತ್ತು.
ಭಾರತದ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ತೀರ್ಪುಗಾರರ ಮಂಡಲಿ ಪ್ರಕಟಿಸಿದ್ದು, ಎಸ್.ಎಸ್. ರಾಜಮೌಳಿ ನಿರ್ದೇಶನದ `ಬಾಹುಬಲಿ’ಗೆ `ಅತ್ಯುತ್ತಮ ಚಿತ್ರ ಪ್ರಶಸ್ತಿ’ ನೀಡಲಾಗಿದೆ. ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾದ ಈ ಚಿತ್ರದ ಮಂತ್ರಮುಗ್ಧಗೊಳಿಸುವ ದೃಶ್ಯ ವೈಭವ ಮತ್ತು ಅದ್ಭುತ ಚಿತ್ರಕಥೆಯಿರುವ ಈ ಚಿತ್ರದ ನಾಯಕ ನಟನಾಗಿ ಪ್ರಭಾಸ್ ಅಭಿನಯಿಸಿದ್ದಾರೆ.
`ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಕಂಗನಾ ರಾನೌತ್ `ಅತ್ಯುತ್ತಮ ನಟಿ ಪ್ರಶಸ್ತಿ’ ಪಡೆದಿದ್ದಾರೆ. ಈ ಚಿತ್ರವನ್ನು ಆನಂದ್ ಎಲ್ ರೈ ನಿರ್ದೇಶಿಸಿದ್ದಾರೆ.
ಶೂಜಿತ್ ಸರ್ಕಾರ್ ನಿರ್ದೇಶನದ `ಪಿಕು’ ಚಿತ್ರದ ಅಭಿನಯಕ್ಕಾಗಿ ಮೇರುನಟ ಅಮಿತಾಬ್ ಬಚ್ಚನ್ `ಅತ್ಯುತ್ತಮ ನಟ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ. ಚಿತ್ರದ ನಾಯಕಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ.
ಬಾಜಿರಾವ್ ಮಸ್ತಾನಿ ಚಿತ್ರದ ನಿರ್ದೇಶನಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ ಅವರಿಗೆ `ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ’ ನೀಡಲಾಗಿದೆ.
ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿ ಜಾನ್ ಅತ್ಯಂತ ಜನಪ್ರಿಯ ಚಿತ್ರ ಪ್ರಶಸ್ತಿ ಪಡೆದಿದ್ದು, ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದಾರೆ.
ಮಸಾನ್ ಚಿತ್ರದ ನಿರ್ದೇಶಕ ನೀರಜ್ ಘೋವಾನ್‌ಗೆ ಅತ್ಯುತ್ತಮ ಪ್ರಥಮ ನಿರ್ದೇಶನ ಪ್ರಶಸ್ತಿ ದೊರೆತಿದೆ.
ನಿಜಜೀವನದ ಕಥೆ ಆಧರಿಸಿದ ತಲ್ವಾರ್ ಚಿತ್ರದ ಅತ್ಯುತ್ತಮ ಕಥಾ ಅಳವಡಿಕೆ ಪ್ರಶಸ್ತಿಯನ್ನು ನಿರ್ದೇಶಕರಾದ ವಿಶಾಲ್ ಭಾರದ್ವಾಜ್ ಪಡೆದಿದ್ದಾರೆ.

Write A Comment