ಕರ್ನಾಟಕ

ಎಸಿಬಿ ಗದ್ದಲದ ನಡುವೆ ಸದನದಲ್ಲಿ ನಿದ್ರೆಗೆ ಜಾರಿದ ಸಿದ್ದರಾಮಯ್ಯ

Pinterest LinkedIn Tumblr

sidduಬೆಂಗಳೂರು: ವಿಧಾನಸಭೆಯಲ್ಲಿ ಎಬಿಸಿ ರಚನೆ ವಿರುದ್ಧ ಬಿಜೆಪಿ ಸದಸ್ಯರು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ರೆಗೆ ಜಾರಿದ್ದರು.

ಪ್ರಸುತ್ತ ಇರುವ ಲೋಕಾಯುಕ್ತ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಎಸಿಬಿ ರಚಿಸಿ ವ್ಯವಸ್ಥೆ ಹಾಳು ಮಾಡಬೇಡಿ. ಲೋಕಾಯುಕ್ತದ ಮೇಲೆ ಜನರಿಗೆ ಇರುವ ನಂಬಿಕೆಯನ್ನು ಸ್ವರೂಪದಲ್ಲೇ ಲೋಕಾಯುಕ್ತ ವ್ಯವಸ್ಥೆ ಮುಂದುವರಿಯಲಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಗದ್ದಲ ಏರ್ಪಟ್ಟಿತು.

ಎಬಿಸಿ ವಿಚಾರವಾಗಿ ಮಹತ್ವದ ಚರ್ಚೆ ನಡೆಯುತ್ತಿದ್ದ ವೇಳೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿದ್ದೆ ಮಾಡಿ ಮತ್ತೊಮ್ಮೆ ಮುಜುಗರಕ್ಕೆ ಒಳಗಾದ ಪ್ರಸಂಗವು ನಡೆಯಿತು. ಸಿಎಂ ಅವರಿಗೆ ಬಿಜೆಪಿ ನಾಯಕ ಗೋವಿಂದ ಕಾರಜೋಳ ಕೂಡ ಸದನದಲ್ಲಿ ನಿದ್ರಿಸಿ ಸಾಥ್ ಕೊಟ್ಟರು.

ಪ್ರಶ್ನೋತರ ವೇಳೆ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪರಸ್ಪರ ಚರ್ಚೆ ನಡೆಸಿ ಒಪ್ಪಿಗೆ ಇದ್ದರೇ ಮಾತ್ರ ಎಸಿಬಿ ರಚನೆ ಮಾಡಬೇಕಿತ್ತು. ಈ ಕಾರ್ಯ ಮಾಡದ ಸರಕಾರಕ್ಕೆ ಜನರ ಶಾಪ ತಟ್ಟುತ್ತದೆ ಎಂದು ವ್ಯಂಗ್ಯವಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸರಕಾರ ವ್ಯವಸ್ಥಿತವಾಗಿಯೇ ತನ್ನ ಹೆಜ್ಜೆ ಇಟ್ಟಿದೆ. ಶಾಪದಲ್ಲಿ ನನಗೆ ನಂಬಿಕೆ ಇಲ್ಲ ಎಂದು ಬಿಜೆಪಿ ಸದಸ್ಯರಿಗೆ ಟಾಂಗ್ ಕೊಟ್ಟರು.

Write A Comment