ಕರ್ನಾಟಕ

ಬೆಂಗಳೂರಿನ ಪಾದ್ರಿಯನ್ನು ಶಿಲುಬೆಗೇರಿಸಿದ ಐಸಿಸ್?

Pinterest LinkedIn Tumblr

father-tom-uzhunnalil--e1459166250712ಬೆಂಗಳೂರು: ಅಪಹರಣಕ್ಕೊಳಗಾಗಿದ್ದ ಬೆಂಗಳೂರಿನ ಪಾದ್ರಿ ಟಾಮ್ ಉಳುನ್ನಲಿಲ್ ಅವರನ್ನು ಐಸಿಸ್ ಉಗ್ರರು ಗುಡ್ ಫ್ರೈಡೇ ದಿನದಂದು ಶಿಲುಬೆಗೇರಿಸಿದ್ದಾರೆಂದು ಅಮೆರಿಕ ಮೂಲದ ವೆಬ್ ಸೈಟ್ ವಾಷಿಂಗ್ಟನ್ ಟೈಮ್ಸ್ ವರದಿ ಮಾಡಿದೆ. ಆದರೆ ಐಸಿಸ್ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ, ವಿಡಿಯೋ ವನ್ನು ಬಿಡುಗಡೆ ಮಾಡಿಲ್ಲ.

ವೃದ್ಧರ ಮತ್ತು ಮಕ್ಕಳ ಏಳಿಗೆಗಾಗಿ ಟಾಮ್ ಉಳುನ್ನಲಿಲ್ ಅವರು ಯೆಮೆನ್ ಗೆ ತೆರಳಿದ್ದರು. ಆದರೆ ಅವರನ್ನು ಮಾ.14ರಂದು ಆಡೆನ್ ನಗರದ ವೃದ್ಧಾಶ್ರಮದಿಂದ ಐಸಿಸ್ ಉಗ್ರರು ಅಪಹರಿಸಿದ್ದರು. ಈ ವೇಳೆ ಭಾರತದ ವಿದೇಶಾಂಗ ಇಲಾಖೆ ಅವರ ಪತ್ತೆಗಾಗಿ ಪ್ರಯತ್ನಿಸಿತ್ತು. ಆದರೆ ಉಗ್ರರು ಪಾದ್ರಿಯನ್ನು ಎಲ್ಲಿರಿಸಿದ್ದಾರೆಂಬ ಮಾಹಿತಿ ದೊರಕಲಿಲ್ಲ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು.

ಕೆಲದಿನಗಳ ಹಿಂದೆ ಗುಡ್ ಫ್ರೈಡೇ ದಿನ ಪಾದ್ರಿಯನ್ನು ಉಗ್ರರು ಶಿಲುಬೆಗೇರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂಬುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ವಿಷಯ ತಿಳಿದ ಅವರ ಕುಟುಂಬ, ಸ್ನೇಹಿತರು ಎಲ್ಲರೂ ಪಾದ್ರಿ ವಾಪಾಸ್ ಬರುವಂತೆ ಪೂಜೆ ಪ್ರಾರ್ಥನೆಗಳನ್ನು ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂಬಂತೆ ಗುಡ್ ಫ್ರೈಡೇ ದಿನ ಐಸಿಸ್ ಉಗ್ರರು ಶಿಲುಬೆಗೇರಿಸಿಯೇ ಬಿಟ್ಟಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

ಮೂಲತಃ ಕೇರಳದವಾರದ ಟಾಮ್ ಉಳುನ್ನಲಿಲ್ ಈ ಹಿಂದೆ ಬೆಂಗಳೂರಿನ ಡಾನ್ ಬಾಸ್ಕೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮಾಹಿತಿ ಊಹಾಪೋಹ:

ಅಮೆನ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯಿಲ್ಲ. ಅಲ್ಲಿ ನಮ್ಮ ಕಚೇರಿ ಕರ್ತವ್ಯ ನಡೆಸಲು ಸಾಧ್ಯವಿಲ್ಲ. ಭಾರತದ ಪಾದ್ರಿಯನ್ನುಶಿಲುಬೆಗೇರಿಸಿದ ಮಾಹಿತಿ ಲಭಿಸಿಲ್ಲ. ಅವರು ಸುರಕ್ಷಿತವಾಗಿದ್ದಾರೆಂದು ಈಗಾಗಲೇ ಯೆಮೆನ್ ನಲ್ಲಿ ನಮ್ಮ ಪಾದ್ರಿಗಳು ಸಂಪರ್ಕಿಸಿ ತಿಳಿಸಿದ್ದಾರೆ ಎಂದು ಡಾನ್ ಬಾಸ್ಕೋ ಹಾಲ್ ಫಾದರ್ ಪಿ ಜಾರ್ಜ್ ತಿಳಿಸಿದ್ದಾರೆ.

Write A Comment