ರಾಷ್ಟ್ರೀಯ

ಕಲ್ಲಿದ್ದಲು ಹಗರಣ: ಜೆಐಪಿಎಲ್, ನಿರ್ದೇಶಕರು ತಪ್ಪಿತಸ್ಥರು; ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು

Pinterest LinkedIn Tumblr

Coalನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಮೊದಲ ತೀರ್ಪು ಹೊರ ಬಿದ್ದಿದೆ. ಮೊದಲ ಪ್ರಕರಣದಲ್ಲಿ ಜಾರ್ಖಂಡ್ ಇಸ್ಪ್ಯಾಟ್ ಪ್ರೈವೇಟ್ ಲಿಮಿಟೆಡ್ (ಜೆಐಪಿಎಲ್) ಹಾಗೂ ಅದರ ಇಬ್ಬರು ನಿರ್ದೇಶಕರು ದೋಷಿಗಳೆಂದು ವಿಶೇಷ ಸಿಬಿಐ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಶರ್ ಅವರು ಜೆಐಪಿಎಲ್ ಕಂಪೆನಿ ಹಾಗೂ ಅದರ ನಿರ್ದೇಶಕರಾದ ಆರ್.ಎಸ್.ರಂಗ್ತಾ ಮತ್ತು ಆರ್.ಸಿ.ರಂಗ್ತಾ ಅವರನ್ನು ಐಪಿಸಿಯ 120ಬಿ(ಕ್ರಿಮಿನಲ್ ಪಿತೂರಿ) ಹಾಗೂ 420 (ವಂಚನೆ) ಕಲಂ ಗಳಡಿ ದೋಷಿಗಳು ಎಂದು ತೀರ್ಪು ನೀಡಿದರು.
ಸದ್ಯ ಜಾಮೀನಿನ ಮೇಲೆ ಹೊರಗಿರುವ ಇಬ್ಬರನ್ನೂ ವಶಕ್ಕೆ ಪಡೆಯುವಂತೆ ಸೂಚನೆ ನೀಡಿದ ನ್ಯಾಯಾಲಯ, ಶಿಕ್ಷೆ ಪ್ರಮಾಣ ಸಂಬಂಧಿತ ವಾದ ಪ್ರತಿವಾದಗಳ ವಿಚಾರಣೆಯನ್ನು ಮಾರ್ಚ್ 31ಕ್ಕೆ ನಿಗದಿಪಡಿಸಿತು.
ಉತ್ತರ ದಾಡು ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ನಡೆದ ಅವ್ಯವಹಾರಗಳ ಸಂಬಂಧಿತ ಪ್ರಕರಣ ಇದಾಗಿದೆ.

Write A Comment