ರಾಷ್ಟ್ರೀಯ

ಬಹಿಷ್ಕಾರದ ಮಧ್ಯೆಯೇ ಎಚ್‌ಸಿಯುಯಲ್ಲಿ ತರಗತಿ ಪುನಾರಂಭ

Pinterest LinkedIn Tumblr

Appa-Raoಹೈದರಾಬಾದ್ (ಪಿಟಿಐ): ಸಾಮಾಜಿಕ ನ್ಯಾಯ ಜಂಟಿ ಕ್ರಿಯಾ ಸಮಿತಿ(ಜೆಎಸಿ) ನೀಡಿರುವ ತರಗತಿ ಬಹಿಷ್ಕಾರ ಕರೆಯ ನಡುವೆಯೇ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ತರಗತಿಗಳು ಪುನಾರಂಭಗೊಂಡಿವೆ. ಜೆಎಸಿ, ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಹೋರಾಟವನ್ನು ಮುನ್ನಡೆಸುತ್ತಿದೆ.
‘ಸೋಮವಾರ ತರಗತಿಗಳು ಪುನಾರಂಭಗೊಂಡಿವೆ. ತರಗತಿಗಳಿಗೆ ಹಾಜರಾಗುವಂತೆ ಉಪಕುಲಪತಿ ಅವರು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ’ ಎಂದು ಎಚ್‌ಸಿಯು ರೆಜಿಸ್ಟ್ರಾರ್‌ ಎಂ. ಸುಧಾಕರ್ ಅವರು ತಿಳಿಸಿದ್ದಾರೆ.
ರೋಹಿತ್ ಪ್ರಕರಣದಲ್ಲಿ ಟೀಕೆ ಎದುರಿಸಿ ಎರಡು ತಿಂಗಳ ರಜೆಯ ಮೇಲೆ ತೆರಳಿದ್ದ ಉಪಕುಲಪತಿ ಅಪ್ಪಾ ರಾವ್ ಅವರು ಮಾರ್ಚ್ 22ರಂದು ಕರ್ತವ್ಯಕ್ಕೆ ಮರಳಿದ್ದರು. ಈ ವೇಳೆ ವಿದ್ಯಾರ್ಥಿಗಳ ಗುಂಪೊಂದು ಅವರ, ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿ ಹಾನಿಗೊಳಿಸಿತ್ತು.
ಘಟನೆಯ ಬಳಿಕ ಪ್ರಕ್ಷುಬ್ಧ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ನಾಲ್ಕು ದಿನಗಳ ಕಾಲ ತರಗತಿಗಳನ್ನು ವಿಶ್ವವಿದ್ಯಾಲಯ ಸ್ಥಗಿತಗೊಳಿಸಲಾಗಿತ್ತು.
ಮತ್ತೊಂದೆಡೆ, ಮಾರ್ಚ್ 22ರಂದು ಸಂಭವಿಸಿದ ಹಿಂಸಾಚಾರ ಘಟನೆಯಲ್ಲಿ ಬಂಧಿತರಾಗಿರುವ 25 ವಿದ್ಯಾರ್ಥಿಗಳು ಹಾಗೂ ಇಬ್ಬರು ಪ್ರಾಧ್ಯಾಪಕರ ಜಾಮೀನು ಅರ್ಜಿಗಳು ಸೋಮವಾರ ವಿಚಾರಣೆಗೆ ಬರಲಿವೆ.

Write A Comment