ರಾಷ್ಟ್ರೀಯ

ಕೇಂದ್ರೀಯ ವಿವಿ ತರಗತಿಗೆ ವಿದ್ಯಾರ್ಥಿಗಳಿಂದ ಬಹಿಷ್ಕಾರ

Pinterest LinkedIn Tumblr

vvಹೈದರಾಬಾದ್,ಮಾ.೨೮- ವಿದ್ಯಾರ್ಥಿ ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣ ಸಂಬಂಧ ಸಾಮಾಜಿಕ ನ್ಯಾಯ ಜಂಟಿ ಕ್ರಿಯಾ ಸಮಿತಿ(ಜೆಎನ್‌ಸಿ) ಹೈದರಾಬಾದ್ ಕೇಂದ್ರೀಯ ವಿವಿಯ ತರಗತಿಗಳನ್ನು ಬಹಿಷ್ಕರಿಸಿ, ಪ್ರತಿಭಟನೆ ಮುಂದುವರೆಸಿದೆ.

ಇಂದಿನಿಂದ ತರಗತಿಗಳು ಆರಂಭವಾಗಿದ್ದು, ಉಪಕುಲಪತಿ ತರಗತಿಗಳಿಗೆ ಹಾಜರಾಗುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ ಎಂದು ವಿವಿಯ ರಿಜಿಸ್ಟ್ರಾರ್ ಎಂ.ಸುಧಾಕರ್ ತಿಳಿಸಿದ್ದಾರೆ.

ಮಾ.೨೨ರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ೨೫ ಮಂದಿ ವಿದ್ಯಾರ್ಥಿಗಳು ಹಾಗೂ ಇಬ್ಬರು ಪ್ರಾಧ್ಯಾಪಕರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ವೆಮುಲ ಆತ್ಮಹತ್ಯೆ ಪ್ರಕರಣದ ಹಿನ್ನೆಲೆ ೨ ತಿಂಗಳ ರಜೆ ಮೇಲೆ ತೆರಳಿ ಇದೀಗ ವಿವಿಗೆ ಕುಲಪತಿ ಅಪ್ಪಾರಾವ್ ವಾಪಸ್ಸಾಗಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಅಪ್ಪಾ ರಾವ್ ಅವರ ಅಧಿಕೃತ ನಿವಾಸವನ್ನು ಧ್ವಂಸಗೊಳಿಸಿದ್ದು, ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಪೊಲೀಸರು ಈ ಸಂದರ್ಭದಲ್ಲಿ ಲಾಠಿ ಪ್ರಹಾರ ನಡೆಸಿ, ಘಟನೆ ಸಂಬಂಧ ೨೫ ಮಂದಿ ವಿದ್ಯಾರ್ಥಿಗಳು ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ವಶಕ್ಕೆ ಪಡೆದಿದ್ದರು.

ಹಿಂಸಾಚಾರದ ಹಿನ್ನೆಲೆ ಮಾ.೨೩ರಂದು ವಿವಿ ನಾಲ್ಕು ದಿನಗಳ ಕಾಲ ತರಗತಿಗಳನ್ನು ಅಮಾನತುಗೊಳಿಸಿತ್ತು. ನಿನ್ನೆಯಷ್ಟೆ ಜೆಎನ್‌ಸಿ ತರಗತಿಗಳನ್ನು ಬಹಿಷ್ಕರಿಸಿದ್ದು, ಉಪಕುಲಪತಿಗಳು ತರಗತಿಗಳಿಗೆ ಹಾಜರಾಗುವಂತೆ ಮನವಿ ಮಾಡಿದರೂ ವಿದ್ಯಾರ್ಥಿಗಳು ಮಣಿಯುತ್ತಿಲ್ಲ.

ವಿದ್ಯಾರ್ಥಿಗಳು ತಮ್ಮ ಭವಿಷ್ಯ, ಓದು, ತರಗತಿಗಳಲ್ಲಿ ಹಾಜರಾಗುವುದು, ಸಣ್ಣ ಹಾಗೂ ಸೆಮಿಸ್ಟರ್ ಪರೀಕ್ಷೆಗಳನ್ನು ಪೂರೈಸುವತ್ತ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ನನ್ನಿಂದ ಮತ್ತು ಪ್ರಾಧ್ಯಾಪಕರಿಂದ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ಉಪಕುಲಪತಿಗಳು ಭರವಸೆ ನೀಡಿದ್ದಾರೆ.

ಜ.೧೭ರಂದು ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಪತಿಗಳು ಕೂಡಾ ಓರ್ವ ಆರೋಪಿಯಾಗಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಚುರುಕುಗೊಳಿಸಿದ್ದರಿಂದ ಜ.೨೪ರಿಂದ ಎರಡು ತಿಂಗಳ ಕಾಲ ರಜೆ ಮೇಲೆ ತೆರಳಿದ್ದರು.

Write A Comment