ರಾಷ್ಟ್ರೀಯ

ಜಾಟ್‌ ಮೀಸಲಾತಿ ಮಸೂದೆಗೆ ಹರಿಯಾಣ ಅಸ್ತು

Pinterest LinkedIn Tumblr

Jat-Protestಚಂಡೀಗಡ(ಪಿಟಿಐ): ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡುವ ಮಸೂದೆಯನ್ನು ಹರಿಯಾಣ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.
ಮೀಸಲಾತಿ ಜಾರಿಗೆ ಪಟ್ಟು ಹಿಡಿದು ಹೋರಾಡುತ್ತಿದ್ದ ಜಾಟ್‌ ಸಮುದಾಯ, ಕಾಯ್ದೆ ಜಾರಿಗೆ ಹರಿಯಾಣ ಸರ್ಕಾರಕ್ಕೆ ಏಪ್ರಿಲ್ 03ರ ಗುಡುವು ವಿಧಿಸಿತ್ತು. ಕಳೆದ ತಿಂಗಳು ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಹಲವು ಜನರು ಸಾವನ್ನಪ್ಪಿದ್ದರು.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಾಟ್‌ ಹಾಗೂ ಇತರ ನಾಲ್ಕು ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಕರಡು ಮಸೂದೆಗೆ ಅನುಮೋದನೆ ದೊರೆತಿದೆ.
ಹರಿಯಾಣದಲ್ಲಿ ಸದ್ಯ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡನೆಯ ನಿರೀಕ್ಷೆಗಳಿವೆ. ಬಜೆಟ್ ಅಧಿವೇಶನವು ಮಾರ್ಚ್ 31ರ ತನಕ ನಡೆಯಲಿದೆ.
ಜಾಟ್‌ ಅಲ್ಲದೇ ಜಾಟ್ ಸಿಖ್ಖರು, ರೊರ್‌ಗಳು, ಬಿಷ್ನೋಯಿಗಳು ಹಾಗೂ ತ್ಯಾಗಿ ಜಾತಿಗಳಿಗೆ, ಇತರೆ ಹಿಂದುಳಿದ ವರ್ಗದಡಿ ಮೀಸಲಾತಿ ಕಲ್ಪಿಸುವ ಮಸೂದೆ ಇದಾಗಿದೆ.

Write A Comment