ರಾಷ್ಟ್ರೀಯ

ಜಹೀರ್ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ

Pinterest LinkedIn Tumblr

Zaheerನವದೆಹಲಿ (ಪಿಟಿಐ): ಮುಂಬರುವ ಐಪಿಎಲ್‌ 9ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ‌ವನ್ನು ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರು ಮುನ್ನಡೆಸಲಿದ್ದಾರೆ.
ಭಾರತದ ಅತ್ಯುತ್ತಮ ಎಡಗೈ ವೇಗಿ ಜಹೀರ್ ಅವರು ಸತತ ಎರಡನೇ ವರ್ಷ ಡೆಲ್ಲಿ ತಂಡದಲ್ಲಿ ಮುಂದುವರೆದಿದ್ದಾರೆ.
ಜಹೀರ್ ನೇಮಕದ ಕುರಿತು ಮಾತನಾಡಿದ ಡೆಲ್ಲಿ ತಂಡದ ಮೆಂಟರ್ ರಾಹುಲ್ ದ್ರಾವಿಡ್, ‘ಜಹೀರ್ ಅವರು ಬಹುಕಾಲದಿಂದಲೂ ನಾಯಕ. ಭಾರತ ಕ್ರಿಕೆಟ್‌ನ್ನು ಬಲ್ಲವರಿಗೆ ಅವರ ಸಾಮರ್ಥ್ಯ ಏನು ಎಂಬುದು ತಿಳಿಯುತ್ತದೆ’ ಎಂದು ನುಡಿದರು.
ಇನ್ನು ‘ಡೆಲ್ಲಿ ತಂಡದ ನಾಯಕತ್ವ ವಹಿಸುತ್ತಿರುವುದು ದೊಡ್ಡ ಗೌರವ. ಈ ಜವಾಬ್ದಾರಿ ವಹಿಸಿಕೊಳ್ಳುವುದು ಕ್ರಿಕೆಟ್‌ಗೆ ಮತ್ತಷ್ಟು ಕೊಡುಗೆ ನೀಡುವ ದಾರಿಯಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಜಹೀರ್, 92 ಟೆಸ್ಟ್‌ ಪಂದ್ಯಗಳಿಂದ 311 ವಿಕೆಟ್ ಪಡೆದಿದ್ದಾರೆ. 200 ಏಕದಿನ ಪಂದ್ಯಗಳಲ್ಲಿ 282 ವಿಕೆಟ್‌ ಉರುಳಿಸಿದ್ದಾರೆ. ಒಟ್ಟು 17 ಟ್ವೆಂಟಿ–20 ಪಂದ್ಯಗಳನ್ನೂ ಅವರು ಆಡಿದ್ದಾರೆ.

Write A Comment