ರಾಷ್ಟ್ರೀಯ

ಫುಟ್ ಬಾಲ್ ಆಟವನ್ನು ಹಳ್ಳಿ-ಹಳ್ಳಿಗಳಿಗೆ ತಲುಪಿಸಬೇಕು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಒತ್ತಾಯ

Pinterest LinkedIn Tumblr

Prime minister in Mann Ki Baat

ನವದೆಹಲಿ: ಕ್ರೈಸ್ತ ಬಾಂಧವರ ಈಸ್ಟರ್ ಭಾನುವಾರ ಹಬ್ಬದ ಪ್ರಯುಕ್ತ ದೇಶದ ಜನತೆಗೆ ಶುಭಾಶಯ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಗೆ ಭಾನುವಾರ ಚಾಲನೆ ನೀಡಿದರು.

ಬೆಳಗ್ಗೆ 11 ಗಂಟೆಗೆ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ ಇಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯಕ್ಕೆ ಆಟಗಾರರಿಗೆ ಶುಭ ಕೋರಿದರು.

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಆಡಿ ಗೆದ್ದ ಭಾರತ ತಂಡದ ಆಟಗಾರರಿಗೆ ಧನ್ಯವಾದ ಹೇಳಿದರು.
17 ವರ್ಷದ ಒಳಗಿನವರಿಗಾಗಿ ಇರುವ ಫೀಫಾ ವಲ್ಡ್ರ್ ಕಪ್-2017 ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಭಾರತ ಹಿಂದೆ ಫೂಟ್ ಬಾಲ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಮ್ಮ ರ್ಯಾಂಕಿಂಗ್ ಮಟ್ಟವೂ ಕುಸಿದಿದೆ-ಪ್ರಧಾನಿ ವಿಷಾದ

ಯುವಕರು ಫುಟ್ ಬಾಲ್ ಪಂದ್ಯವನ್ನು ಕೂಡ ಐಪಿಎಲ್ ಕ್ರಿಕೆಟ್ ನಂತೆ ಸಂಭ್ರಮಿಸುತ್ತಾರೆ. ಫುಟ್ ಬಾಲ್ ಪಂದ್ಯವನ್ನು ಭಾರತದ ಪ್ರತಿ ಗ್ರಾಮಗಳಿಗೆ ತಲುಪಿಸುವುದು ಮುಖ್ಯ.

ಫೀಫಾ ವಲ್ಡ್ರ್ ಕಪ್ ಯು-17ರ 2017 ರ ಆತಿಥೇಯ ಭಾರತ ನಿರ್ವಹಿಸುತ್ತಿರುವುದರಿಂದ ಕ್ರೀಡೆಗೆ ಸಂಬಂಧಪಟ್ಟ ಮೂಲ ಸೌಕರ್ಯವನ್ನು ವೃದ್ಧಿಪಡಿಸಲು ನಮಗೆ ಇದೊಂದು ಅವಕಾಶ.

ಆಕಾಶವಾಣಿಯಲ್ಲಿ ಸರಣಿ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 18ನೇ ಆವೃತ್ತಿ ಇಂದು ಪ್ರಸಾರ. ಇಂದಿನ ಪ್ರಧಾನಿಯವರ ಭಾಷಣದ ಇನ್ನು ಕೆಲವು ಮುಖ್ಯಾಂಶಗಳು ಈ ರೀತಿ ಇವೆ.
ಮುಂದಿನ ವರ್ಷ ಅಂದರೆ 2017ರಲ್ಲಿ ಭಾರತ 17 ವರ್ಷಕ್ಕಿಂತ ಕೆಳಗಿನ ಹುಡುಗರು ಆಡುವ ಫೀಫಾ ವಿಶ್ವಕಪ್ ನ ಆತಿಥೇಯ ವಹಿಸಲಿದೆ.

ಫೀಫಾ ವಿಶ್ವಕಪ್ ನಲ್ಲಿ ಭಾರತದ ಬ್ರಾಂಡ್ ಗಳನ್ನು ವಿಶ್ವಕ್ಕೆ ಪರಿಚಯಿಸಲು ಒಂದು ಉತ್ತಮ ಅವಕಾಶವಿದೆ.
ಏಪ್ರಿಲ್ 7 ವಿಶ್ವ ಆರೋಗ್ಯ ದಿನ. ಈ ವರ್ಷ ಆರೋಗ್ಯ ದಿನವನ್ನು ಡಯಾಬಿಟಿಸ್ ಖಾಯಿಲೆ ವಿಷಯಕ್ಕೆ ಮೀಸಲಿಡಲಾಗಿದೆ.ಡಯಾಬಿಟಿಸ್ ಹೆಚ್ಚಾಗಲು ಮುಖ್ಯ ಕಾರಣ ಜನರ ಜೀವನಶೈಲಿ. ದೇಶದ ಜನರು ಆರೋಗ್ಯವಾಗಿದ್ದರೆ ದೇಶ ಆರೋಗ್ಯವಾಗಿರುತ್ತದೆ ಎಂದ ಮೋದಿ.

ಪರಿಸರ ಸ್ನೇಹಿ ಗಣಿ ಪ್ರವಾಸೋದ್ಯಮ ಸ್ಥಳಗಳನ್ನು ರಚಿಸಿದ್ದಕ್ಕಾಗಿ ಕೋಲ್ ಇಂಡಿಯಾ ಲಿಮಿಟೆಡ್ ಗೆ ಪ್ರಧಾನಿ ಅಭಿನಂದನೆ.

ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಯಾಗುತ್ತದೆ. ಇಂದಿನ ಯುವಕರು ಪ್ರವಾಸೋದ್ಯಮದ ಬಗ್ಗೆ, ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಹೋಗುವುದರ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ.

ಪ್ರವಾಸ ನಮಗೆ ಸಾಕಷ್ಟು ಅನುಭವಗಳನ್ನು ಕಲಿಸುತ್ತದೆ. ಮನೆ, ತರಗತಿ, ಸ್ನೇಹಿತರ ಬಳಿ ಕಲಿಯದಿರುವ ಹಲವು ವಿಷಯಗಳನ್ನು ನಾವು ಪ್ರವಾಸಕ್ಕೆ ಹೋಗುವುದರ ಮೂಲಕ ಕಲಿಯುತ್ತೇವೆ. ಪ್ರವಾಸಕ್ಕೆ ಹೋಗುವಾಗ ಗಮನಿಸದ ಪ್ರವಾಸಿ ರೆಕ್ಕೆಯಿಲ್ಲದ ಹಕ್ಕಿಯಿದ್ದಂತೆ” ಎಂದರು ಪ್ರಧಾನಿ.

ದೇಶದ ರೈತರ ಕಾರ್ಯಚಟುವಟಿಕೆಗಳಿಗೆ ನೆರವಾಗಲು ಅಪ್ಲಿಕೇಶನ್ ವೊಂದು ಪ್ರಾರಂಭ. ಇದು ರೈತರಿಗೆ ಪ್ರಯೋಜನವಾಗುತ್ತದೆ ಎಂಬ ನಂಬಿಕೆ.

Write A Comment