ರಾಷ್ಟ್ರೀಯ

ವಾಟ್ಸ್ ಆಪ್ ನಲ್ಲಿ ಅವಹೇಳನಕಾರಿ ಹೇಳಿಕೆ; ಛತ್ತೀಸ್ ಗಢದಲ್ಲಿ ಮತ್ತೋರ್ವ ಪತ್ರಕರ್ತನ ಬಂಧನ

Pinterest LinkedIn Tumblr

arrested

ರಾಯ್ಪುರ: ವಾಟ್ಸ್ ಆಪ್ ನಲ್ಲಿ ಪೊಲೀಸರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಪತ್ರಕರ್ತನೋಬ್ಬನನ್ನು ಬಂಧನದ ನಂತರ ಕೆಲವೇ ದಿನಗಳಲ್ಲಿ ಮತ್ತೊಬ್ಬ ಪತ್ರಕರ್ತನನ್ನು ಬಂಧಿಸಲಾಗಿದೆ.

ಏಳು ತಿಂಗಳ ಹಿಂದೆ ದಾಖಲಾಗಿದ್ದ ಪ್ರಕರಣದ ಬಗ್ಗೆ ಈಗ ಕಾರ್ಯಾಚರಣೆ ನಡೆಸಿದ ಪೊಲೀಸರು ಪತ್ರಕರ್ತ ದೀಪಕ್ ಜೈಸ್ವಾಲ್ ನನ್ನು ಬಂಧಿಸಿದ್ದಾರೆ. 7 ತಿಂಗಳ ಹಿಂದೆ ಛತ್ತೀಸ್ ಗಢದ ಪ್ರೌಢ ಶಾಲೆ ಪ್ರಾಂಶುಪಾಲ ರಂಜಿತ್ ಟಿಕಮ್ ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ದೀಪಕ್ ಜೈಸ್ವಾಲ್ ನನ್ನು ಬಂಧಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಛತ್ತೀಸ್ ಗಢದ ಬಸ್ತಾರ್ ಪ್ರದೇಶದಲ್ಲಿ ಪೊಲೀಸರು ಪತ್ರಕರ್ತರನ್ನು ಬಂಧಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೇ.2015 ರಲ್ಲಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಅನುಮತಿ ಇಲ್ಲದೇ ಪರೀಕ್ಷಾ ಕೊಠಡಿಗೆ ತೆರಳಿದ್ದ ಜೈಸ್ವಾಲ್ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪತ್ರಕರ್ತನ ಹಿನ್ನೆಲೆ ಬಗ್ಗೆ ವಿಚಾರಣೆ ನಡೆಸಿರುವ ಪೊಲೀಸರು ಬಂಧಿತ 2014 ರಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿಸಿದ್ದಾರೆ. ಬಂಧಿತ ಪತ್ರಕರ್ತನ ವಿರುದ್ಧ ಐಪಿಸಿ ಸೆಕ್ಷನ್ 448 , 385 , 353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Write A Comment