ರಾಷ್ಟ್ರೀಯ

ದೆಹಲಿಯ ರಹಸ್ಯ ಸುರಂಗಮಾರ್ಗಕ್ಕೆ ರೆಕ್ಕೆಪುಕ್ಕ

Pinterest LinkedIn Tumblr

Fort_Tunnel-ನವದೆಹಲಿ, ಮಾ. ೨೬ – ಈ ಹಿಂದೆ ಬ್ರಿಟಿಷರ ಆಳ್ವಿಕೆ ಇದ್ದಾಗ ಭಾರತೀಯ ಸಂಸತ್ತಾಗಿದ್ದ ಈಗಿನ ದೆಹಲಿ ಸ್ಥಳೀಯ ಸರ್ಕಾರದ ಕಛೇರಿಯಾಗಿರುವ ವಸಾಹತು ಶಾಹಿ ಕಟ್ಟಡದಲ್ಲಿ ಪತ್ತೆಯಾಗಿರುವ ನೆಲಮಾಳಿಗೆ ನಾನಾ ವ್ಯಾಖ್ಯಾನಗಳನ್ನು ಹುಟ್ಟಿ ಹಾಕಿವೆ.

ಬ್ರಿಟಿಷರು ದೇಶದ ರಾಜಧಾನಿಯನ್ನು ದೆಹಲಿಯಿಂದ ಕೊಲ್ಕತ್ತಾಗೆ ವರ್ಗಾಯಿಸಿದ ವರ್ಷ ಅಂದರೆ 1911 ರಲ್ಲಿ ನಿರ್ಮಾಣವಾದ ಈ ಕಟ್ಟಡ, ನೆಲಮಾಳಿಗೆ ವಾಸ್ತುಶಿಲ್ಪ ಕೌಶಲ್ಯದ ಪ್ರತೀಕದಂತಿದೆ.

ಬ್ರಿಟಿಷರ ಕಾಲದ ಸಂಸತ್ತು ನಡೆಯುತ್ತಿದ್ದ ಕಟ್ಟಡ ನೆಲಮಾಳಿಗೆ ಹಲವು ಸುದ್ದಿಗಳಿಗೆ ಗ್ರಾಸವಾಗಿದೆ. ಈ ನೆಲಮಾಳಿಗೆಯನ್ನು ಈಚೆಗೆ ದೆಹಲಿಯ ವಿಧಾನಸಭಾ ಸ್ಪೀಕರ್ ರಾಮ್‌ ನಿವಾಸ್ ಗೋಯಲ್ ಪತ್ತೆ ಮಾಡಿದ್ದರು. ಕಛೇರಿ ಸಿಬ್ಬಂದಿ ನೆಲಮಾಳಿಗೆ ಬಗ್ಗೆ ಮಾತನಾಡುತ್ತಿರುವುದನ್ನು ಗಮನಿಸಿದ ಈ ನೆಲಮಾಳಿಗೆಯನ್ನು ಮತ್ತೆ ಮಾಡಲು ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

ಈ ನೆಲ ಮಾಳಿಗೆ ಅತ್ಯಂತ ವೈಭವಯುತವಾಗಿದ್ದು, ವಾಸ್ತುಶಿಲ್ಪ ಕೌಶಲ್ಯದ ಪ್ರವೇಶದಂತಿದೆ. ಈ ನೆಲಮಾಳಿಗೆಯ ದ್ವಾರ ಎಲ್ಲಿದೆ ಎಂಬುದು ಇನ್ನೂ ಬಯಲಾಗಿಲ್ಲ. ಆದರೆ, ಹಸಿರು ಕಾರ್ಪೆಟ್ ಎತ್ತಿದರೆ ಒಂದು ಕೈಹಿಡಿ ಇದೆ ಅದನ್ನು ತಿರುವಿದರೆ ನೆಲಮಾಳಿಗೆಯನ್ನು ಇಣುಕಿ ನೋಡುವ ದ್ವಾರ ಸಿಗುತ್ತದೆ.

ಅಲ್ಲಿಂದ ಇಣುಕಿ ನೋಡಿದರೆ 5 ಅಡಿ ಆಳದ 15 ಅಡಿ ಅಗಲದ ಕಛೇರಿ, ಜತೆಗೆ ಒಂದು ಸಣ್ಣ ಕಾರಿಡಾರ್ ಸಹ ಇದೆ.

1926 ರಲ್ಲಿ ಭಾರತೀಯ ಸಂಸತ್ತು ಈ ಕಟ್ಟಡದಿಂದ ಕೇಂದ್ರಿಯ ದೆಹಲಿಗೆ ವರ್ಗಾವಣೆಯಾದ ನಂತರ ಈ ಕಟ್ಟಡ ನ್ಯಾಯಾಲಯದ ಕಟ್ಟಡವಾಗಿತ್ತು.

ಮೊಗಲರ ಕಾಲದಲ್ಲಿ ಕೆಂಪುಕೋಟೆಯಿಂದ ಈ ಕಟ್ಟಡದ ದಾರಿ ಬಳಸಿ ಖೈದಿಗಳನ್ನು ತರಲಾಗುತ್ತಿತ್ತು ಎನ್ನಲಾಗಿದ್ದು, ಈ ನೆಲಮಾಳಿಗೆ ಕೆಂಪುಕೋಟೆಗೆ ಸಂಪರ್ಕ ಪಡೆದಿತ್ತು ಎಂದು ದೆಹಲಿ ವಿಧಾನಸಭಾಧ್ಯಕ್ಷ ರಾಮ್‌ಗೋಯಲ್ ಹೇಳುತ್ತಾರೆ.

ಬ್ರಿಟಿಷರ ಕಾಲದಲ್ಲಿ ಈ ನೆಲಮಾಳಿಗೆಯನ್ನು ರಾಜಕೀಯ ಖೈದಿಗಳನ್ನು ಇಡಲು ಬಳಸಲಾಗುತ್ತಿತ್ತು, ಅಲ್ಲಿಂದಲೇ ನ್ಯಾಯಾಲಯಕ್ಕೆ ಅವರನ್ನು ಕರೆ ತರಲಾಗುತ್ತಿತ್ತು ಎಂದು ಗೋಯಲ್ ಹೇಳುತ್ತಾರೆ.

ನ್ಯಾಯಾಲಯದಿಂದ ಈ ರಾಜಕೀಯ ಖೈದಿಗಳನ್ನು ನೇಣಿಗೆ ಹಾಕಲು ಈ ನೆಲಮಾಳಿಗೆ ಮೂಲಕ ಕರೆದೊಯ್ಯಲಾಗುತ್ತಿದ್ದು, ನೇಣಿಗೆ ಏರಿಸಲು ಒಂದು ಕೊಠಡಿಯೂ ಇಲ್ಲಿದೆ ಎಂದು ಅವರು ಹೇಳುತ್ತಾರೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಕಲಿಗಳು ಬ್ರಿಟಿಷರಿಂದ ಅನುಭವಿಸಿರುವ ಹಿಂಸೆ, ತೊಂದರೆಯನ್ನು ನೆನಪು ಮಾಡಲು ಈ ನೆಲಮಾಳಿಗೆಯನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

Write A Comment