ರಾಷ್ಟ್ರೀಯ

ಐಎಸ್ ಕಪಿಮುಷ್ಠಿಯಿಂದ ಪಾದ್ರಿ ಬಿಡುಗಡೆಗೆ ಹರಸಾಹಸ

Pinterest LinkedIn Tumblr

sushನವದೆಹಲಿ, ಮಾ. ೨೬ – ಬೆಂಗಳೂರು ಮೂಲದ ಭಾರತದ ಕ್ರೈಸ್ತ ಪಾದ್ರಿ ಉಳುನ್ನಲಿಲ್ ಸುರಕ್ಷಿತ ಬಿಡುಗಡೆಗೆ ಯತ್ನಗಳು ಮುಂದುವರೆದಿವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

`ಯಮೆನ್‌ನಲ್ಲಿ ಉಗ್ರರಿಂದ ಅಪಹರಣಗೊಂಡಿರುವ ಭಾರತದ ಪಾದ್ರಿ ಸುರಕ್ಷಿತ ಬಿಡುಗಡೆಗೆ ನಾವು ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದೇವೆ’ ಎಂದು ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಟ್ವೀಟನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಯಮೆನ್ ದೇಶದ ವೃದ್ಧಾಶ್ರಮದಿಂದ ಭಾರತೀಯ ಕ್ರೈಸ್ತ ಪಾದ್ರಿ ಉಳುನ್ನಲಿಲ್‌ರನ್ನು ಉಗ್ರರು ಬಂಧಿಸಿದ್ದರು. ಏಸುಕ್ರಿಸ್ತ ಶಿಲುಬೆ ಏರಿದ ದಿನದಂದೇ ಪಾದ್ರಿಯನ್ನು ಶಿಲುಬೆಗೆ ಏರಿಸುವುದಾಗಿ ಐಸಿಎಸ್ ಉಗ್ರರು ಬೆದರಿಕೆ ಹಾಕಿದ್ದಾರೆ.

ಉಗ್ರರ ಈ ಬೆದರಿಕೆಯಿಂದ ಕ್ರಿಶ್ಚಿಯನ್ ಸಮುದಾಯ ಭಾರಿ ತಳಮಳಗೊಂಡಿದೆ. ಪಾದ್ರಿ ಬಿಡುಗಡೆಗೆ ಕೋರಿ ಕೇಂದ್ರ ಸರಕಾರವನ್ನು ಒತ್ತಾಯಿಸಿವೆ.

ಮಾರ್ಚ್ 4 ರಂದು ಪಾದ್ರಿಯನ್ನು ಅಪಹರಣ ಮಾಡಲಾಗಿದೆ. ವಡನ್‌ನಲ್ಲಿಯ ವೃದ್ಧಾಶ್ರಮದ ಮೇಲೆ ದಾಳಿ ನಡೆಸಿದ್ದ ಉಗ್ರರು ನಾಲ್ಕು ಮಂದಿ ಭಾರತೀಯರು ಸೇರಿದಂತೆ 16 ಮಂದಿಯನ್ನು ಹತ್ಯೆ ಮಾಡಿತ್ತು.

ವದಂತಿಗಳು

ಇಂತಹ ವದಂತಿಗಳು ಕೆಲವು ಸಮಯದಿಂದ ಇದೆ. ಅವರ ಜೀವಕ್ಕೆ ಅಪಾಯವಿಲ್ಲ, ಅವರನ್ನು ಪತ್ತೆಹಚ್ಚಲು ಸರ್ಕಾರವನ್ನು ಕೋರಿದ್ದೇವೆ ಎಂದು ಪಾದ್ರಿ ಮ್ಯಾಥ್ಯು ವಲಾರ್ ಕೋಟ್ ಹೇಳಿದ್ದಾರೆ.

Write A Comment