ರಾಷ್ಟ್ರೀಯ

ಲೇಹ್‌ನಲ್ಲಿ ಹಿಮಪಾತ: ಯೋಧ ನಾಪತ್ತೆ

Pinterest LinkedIn Tumblr

himapattttaಶ್ರೀನಗರ (ಏಜೆನ್ಸೀಸ್‌): ಜಮ್ಮು ಮತ್ತು ಕಾಶ್ಮೀರದ ಲೇಹ್‌ನ ಟರ್ಟಕ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿರುವ ಹಿಮಪಾತದಲ್ಲಿ ಒಬ್ಬ ಯೋಧ ನಾಪತ್ತೆಯಾಗಿದ್ದಾರೆ.
ಘಟನೆಯಲ್ಲಿ ಮತ್ತೊಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಪತ್ತೆಯಾಗಿರುವವರಿಗಾಗಿ ಸೇನಾ ಪಡೆ ಹುಡುಕಾಟ ನಡೆಸುತ್ತಿದೆ.

ಹಿಮಪಾತದ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಸೈನಿಕರು ಹಿಮಪಾತಕ್ಕೆ ಸಿಲುಕಿದ್ದಾರೆ.

Write A Comment