ಕರ್ನಾಟಕ

ಮಗನನ್ನು ಆಡಲು ಕಳುಹಿಸಿ ತಾಯಿ ನೇಣು

Pinterest LinkedIn Tumblr

hanging-ropeಬೆಂಗಳೂರು,ಮಾ.೨೫-ಮಗನನ್ನು ಆಟವಾಡಲು ಕಳುಹಿಸಿದ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ಪುಲಕೇಶಿನಗರದ ಬಾಬುಸಾಬ್‌ಪಾಳ್ಯದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬಾಬುಸಾಬ್‌ಪಾಳ್ಯದ ಬ್ಯಾಂಕ್ ಅವಿನ್ಯೂವಿನ ಸೆಲ್ವಿ(೨೮) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ,ಏರ್‌ಟೆಲ್‌ನಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಮುತ್ತುಪಾಂಡಿಯನ್ನು ೭ ವರ್ಷಗಳ ಹಿಂದೆ ವಿವಾಹವಾಗಿದ್ದ ಸೆಲ್ವಿ ಅವರಿಗೆ ೫ ವರ್ಷದ ಗಂಡುಮಗನಿದ್ದಾನೆ.
ಮುತ್ತುಪಾಂಡಿ ಅವರು ನಿನ್ನೆ ಮಧ್ಯಾಹ್ನ ಕೆಲಸಕ್ಕೆ ಹೋದ ನಂತರ ರಾತ್ರಿ ಮಗನನ್ನು ಪಕ್ಕದ ಮನೆಗೆ ಆಟವಾಡಲು ಕಳುಹಿಸಿದ ಸೆಲ್ವಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ರಾತ್ರಿ ೯ರ ವೇಳೆ ಮುತ್ತುಪಾಂಡಿ ಅವರು ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಬಾಗಿಲಿಗೆ ಒಳಗಿನೀಮದ ಚಿಲಕಹಾಕಿತ್ತು.
ಎಷ್ಟು ಬಾಗಿಲು ಬಡಿದರೂ ತೆಗೆಯದ ಹಿನ್ನಲೆಯಲ್ಲಿ ಬಾಗಿಲು ಮುರಿದು ಒಳಹೋಗಿ ನೋಡಿದಾಗ ಸೆಲ್ವಿ ಅವರು ನೇಣುಬಿಗಿದುಕೊಂಡಿದ್ದರು.ಗೃಹಿಣಿಯಾಗಿದ್ದ ಸೆಲ್ವಿ ಪತಿಯೊಂದಿಗೆ ಅನೋನ್ಯವಾಗಿದ್ದರು ಎಂದು ಸ್ಥಳೀಯರು ಸಂಬಂಧಿಕರು ತಿಳಿಸಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಪುಲಕೇಶಿನಗರದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment