ಕರ್ನಾಟಕ

ಯುವತಿಯೊಂದಿಗೆ ಪ್ರಿಯಕರ ನೇಣಿಗೆ ಶರಣು

Pinterest LinkedIn Tumblr

boy-hangs9-500x400ಚಿಕ್ಕಮಗಳೂರು, ಮಾ. ೨೫- ವಸತಿ ಗೃಹವೊಂದರಲ್ಲಿ ಖಾಸಗಿ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಯುವತಿಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ನಗರದ ವಸತಿ ಗೃಹದಲ್ಲಿ ನವೀನ್ ಹಾವೇರಿ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟರಾಗಿದ್ದಾರೆ.‌
ಹಾಸನ ಸೇರಿದಂತೆ, ಹಲವು ಕಡೆ ಕೆಲಸ ಮಾಡಿರುವ ನವೀನ್ ಹಾವೇರಿ, ಲಾಡ್ಜ್ ಒಂದರ ಕೊಠಡಿ ಪಡೆದು ಈ ಕೃತ್ಯ ಎಸಗಿರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಈತ ವಿವಾಹಿತನಾಗಿದ್ದು, ಮಗು ಹಾಗೂ ಪತ್ನಿ ಈತನನ್ನು ಬಿಟ್ಟುಹೋಗಿದ್ದರು.
ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Write A Comment