
ಶಂಕರ್ ನಿರ್ದೇಶನದ ಎಂದಿರನ್ 2 ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಫೋಟೋ ಅನಾವರಣಗೊಂಡಿದೆ.
ಖಳನಾಯಕನಾದರು ಅಕ್ಷಯ್ ಕುಮಾರ್ ಅವರು ಚಿತ್ರದಲ್ಲಿ ಹೇಗೆ ಕಾಣುತ್ತಾರೆ ಎಂಬ ವಿಷಯ ಮಾತ್ರ ಬಹಿರಂಗವಾಗಿರಲಿಲ್ಲ. ಇದೀಗ ದೆಹಲಿಯ ಜವಾಹರ್ ಲಾಲ್ ನೆಹರು ಸ್ಡೇಡಿಯಂನಲ್ಲಿ ಚಿತ್ರೀಕರಣವಾಗುತ್ತಿರುವ ಸಂದರ್ಭದಲ್ಲಿ ಅಕ್ಷಯ್ ಅಭಿಮಾನಿಯೊಬ್ಬ ಫೋಟೋ ಕ್ಲಿಕಿಸಿ ಅನಾವರಣ ಮಾಡಿದ್ದಾರೆ.
ಸದ್ಯ ಫೋಟೋವನ್ನು ನೋಡದರೆ ಇದು ನಿಜಕ್ಕೂ ಅಕ್ಷಯ್ ಕುಮಾರ್ ಅವರೇನಾ ಎಂದು ಆಶ್ಚರ್ಯವಾಗುಬಹುದು. ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಡಾ. ರಿಚರ್ಡ್ ಎಂಬ ವಿಜ್ಞಾನಿಯ ಪಾತ್ರ ಮಾಡುತ್ತಿದ್ದಾರೆ. ಒಂದು ಪ್ರಯೋಗ ಮಾಡುವ ಸಂದರ್ಭದಲ್ಲಿ ಸ್ವಲ್ಪ ಎಡವಟ್ಟಾಗಿ ತಮ್ಮ ರೂಪವನ್ನು ಕಳೆದುಕೊಳ್ಳುವ ವಿಜ್ಞಾನಿಯಾಗಿ ಅಕ್ಷಯ್ ಅಭಿನಯಿಸಿದ್ದಾರೆ.