ರಾಷ್ಟ್ರೀಯ

ಬ್ರಸೆಲ್ಸ್‌ ಸ್ಫೋಟ: ಜೆಟ್‌ ಏರ್‌ವೇಸ್‌ನ ಸಿಬ್ಬಂದಿಗೆ ಗಾಯ

Pinterest LinkedIn Tumblr

jetairwayswebನವದೆಹಲಿ: ಬ್ರಸೆಲ್ಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ ಜೆಟ್‌ ಏರ್‌ವೇಸ್‌ನ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಜೆಟ್‌ ಏರ್‌ವೇಸ್ ಸಂಸ್ಥೆಯು ದೆಹಲಿ ಮತ್ತು ಮುಂಬೈನಿಂದ ಪ್ರತಿನಿತ್ಯ ಬ್ರಸೆಲ್ಸ್‌ಗೆ ವೈಮಾನಿಕ ಸೇವೆ ಒದಗಿಸುತ್ತಿದೆ. ಸ್ಫೋಟದ ಹಿನ್ನೆಲೆಯಲ್ಲಿ ಮಾರ್ಚ್‌ 26ರವರೆಗೆ ಬ್ರಸಲ್ಸ್‌ಗೆ ಹಾರಾಟ ನಡೆಸುವ ಎಲ್ಲ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಬ್ರಸೆಲ್ಸ್‌ ವಿಮಾನ ನಿಲ್ದಾಣದಲ್ಲಿರುವ ಜೆಟ್‌ ಏರ್‌ವೇಸ್‌ನ ವಿಮಾನ ಮತ್ತು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ. ಇದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನ ನಡೆಸಿದ್ದೇವೆ ಎಂದು ಸಂಸ್ಥೆ ಹೇಳಿದೆ.

News from Brussels is disturbing. The attacks are condemnable. Condolences to families of the deceased. May those injured recover quickly.
— Narendra Modi (@narendramodi) 22 March 2016
ಜೆಟ್‌ ಏರ್‌ವೇಸ್‌ನ ಒಬ್ಬರು ಮಹಿಳಾ ಸಿಬ್ಬಂದಿ ಗಾಯಗೊಂಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ.

Write A Comment