ರಾಷ್ಟ್ರೀಯ

ರಾಜಸ್ಥಾನದ ಹೋಂಡಾ ಕಂಪೆನಿಯ 407 ಕಾರ್ಮಿಕರ ಬಾಳು ಬೀದಿ ಪಾಲು

Pinterest LinkedIn Tumblr

rajaದಾಬಸ್‌ಪೇಟೆ, ಮಾ.22- ರಾಜಸ್ಥಾನದ ಹೊಂಡಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 407 ಕಾಮಿಕರನ್ನು ಅಮಾನತು ಮಾಡಿರುವ ಬಗ್ಗೆ ರಾಜಸ್ಥಾನದ ಕಾರ್ಮಿಕ ಮುಖಂಡ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ. ನಾನು ಸೇರಿದಂತೆ 407 ಜನ ಕಂಪನಿಯಲ್ಲಿ ಹಾಗೂ 3000 ಜನ ಅರೆಕಾಲಿಕ ಉದ್ಯೊಗಿಗಳಾಗಿ ಕೆಲಸ ಮಾಡುತ್ತಿದ್ದೇವೆ, ಆದರೆ 2015 ಆಗಸ್ಟ್ 8 ರಲ್ಲಿ ನಾವು ಕಾರ್ಮಿಕ ಸಂಘಟನೆಯನ್ನು ಮಾಡಲು ಹೋದಾಗ ಯಾವುದೇ ಮಾಹಿತಿ ನೀಡದೇ ಪೋಲಿಸರು ನಮ್ಮನ್ನು ಬಂದಿಸಿ ಸೆರೆವಾಸದಲ್ಲಿ ನಮ್ಮ ಹೆಸರು ಹಾಗೂ ನಮ್ಮ ವಿಳಾಸವನ್ನು ತೆಗೆದುಕೊಂಡಿದ್ದಾರೆ.

ಹೊಂಡ ಕಂಪನಿಯ ಬಾಗಿಲನ್ನು ಮುಚ್ಚಿ ನಾವು ನಿರಾಶ್ರಿತರಾಗಲು ರಾಜಸ್ಥಾನ ಸರ್ಕಾರ ಕಾರಣವಾಗಿದೆ ಈ ಬಗ್ಗೆ ನಾವು ದೇಶ ವ್ಯಾಪ್ತಿ ತಂಡಗಳನ್ನು ಮಾಡಿಕೊಂಡು ಎಲ್ಲಾ ಕಾರ್ಮಿಕ ಸಂಘಟನೆಗಳಿಗೆ ಮಹಿತಿ ನೀಡುತ್ತಿದ್ದೇವೆ ಎಂದರು. ಇನ್ನು ಮುಂದಾದರು ಕಾರ್ಮಿಕರ ಮತ್ತು ರೈತಾಪಿ ಜನರ ಯೋಗಕ್ಷೇಮವನ್ನು ಸರ್ಕಾರಗಳು ಅವರ ಕುಂದು ಕೊರತೆಗೆ ಯವುದೇ ರೀತಿಯ ಹಾನಿಯಗದಂತೆ ತಡೆಯಲಿ ಎಂದರು. ಡೆನ್ಸೋ ಕಿರ್ಲೋಸ್ಕರ್ ಸಂಘಟನೆಯ ಅಧ್ಯಕ್ಷ ಬಸವರಾಜು ಮಾತನಾಡಿ, ಸಿಐಟಿಯು ಸಂಘಟನೆ ಸಹಾಯವನ್ನು ಮಾಡುತ್ತದೆ ಇಂದಿನ ದಿನಗಳಲ್ಲಿ ಸರ್ಕಾರಗಳು ಕಾರ್ಮಿಕರ ಗೋಳು ಅರಿಯದಾಗಿವೆ ಎಂದು ವಿಷಾದಿಸಿದರು.

ಹೊಂಡ ಕಂಪನಿಯ ಉದ್ಯೋಗಿ ಸುದೀರ್, ಎಲ್.ಎಂ.ವಿಂಡ್ ಪವರ್ ಕಾರ್ಖಾನೆಯ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯೀದರ್ಶಿ ಶಂಭಣ್ಣ, ಜೆಮ್ ಪೇಂಟ್ಸ್ ಕಾರ್ಖಾನೆಯ ಅಧ್ಯಕ್ಷ ಬಾಲರಾಜು, ಎಂ.ವಿ.ಸೋಲಾರ್ ಕಾರ್ಖಾನೆಯ ಅಧ್ಯಕ್ಷ ಮೋಹನ್‌ಕುಮಾರ್, ಟಿ.ಡಿ.ಪಿ.ಎಸ್ ಕಾರ್ಖಾನೆಯ ಅಧ್ಯಕ್ಷರು ಹಾಗೂ ಸೋಂಪುರ ಹೋಬಳಿಯ ಎಲ್ಲಾ ಕಾರ್ಖಾನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Write A Comment