ಕರ್ನಾಟಕ

ಯಾವುದೇ ಕಾರಣಕ್ಕೂ ಎಸಿಬಿ ಅಧಿಸೂಚನೆ ಹಿಂಪಡೆಯುವುದಿಲ್ಲ: ಸಿಎಂ

Pinterest LinkedIn Tumblr

siddaramiah-900ಬೆಂಗಳೂರು : ಯಾವುದೇ ಕಾರಣಕ್ಕೂ ಭೃಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆಯ ಅಧಿಸೂಚನೆಯನ್ನು ಹಿಂಪಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಸೂಚನೆ ಹಿಂಪಡೆಯಬೇಕೆಂಬ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.

ಎಸಿಬಿ ರಚನೆಯಿಂದ ಲೋಕಾಯುಕ್ತ ಸಂಸ್ತೆ ದುರ್ಬಲಗೊಳ್ಳುವುದಿಲ್ಲ .ಇದು ತಪ್ಪು ಕಲ್ಪನೆ .ಸರ್ಕಾರಯಾವುದೇ ಕಾರಣಕ್ಕೂ ಭಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಭೃಷ್ಟರನ್ನು ರಕ್ಷಿಸುವ ಉದ್ದೇಶ ಇಲ್ಲ ಎಂದರು.

ಎಸಿಬಿ ರಚನೆಯಿಂದ ಲೋಕಾಯುಕ್ತರ ಅಧಿಕಾರವನ್ನು ಯಾವುದೇ ರೀತಿ ಮೊಟಕುಗೊಳಿಸುವುದಿಲ್ಲ. ಲೋಕಾಯುಕ್ತದ ಕೆಲಸವು ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ಸಾಗುತ್ತದೆ.ಜನರು ಈ ಬಗೆಗಿನ ಗೊಂದಲ ದೂಲ ಮಾಡಬೇಕು ಎಂದು ಸಿಎಂ ಮನವಿ ಮಾಡಿದರು.

ಒಂದು ವೇಳೆ ಮುಖ್ಯಮಂತ್ರಿಗಳ ಮೇಲೆ ಲೋಕಾಯುಕ್ತ ಕಾಯ್ದೆಯಡಿ ಲೋಕಾ ಯುಕ್ತದಲ್ಲಿ ದೂರು ದಾಖಲಾದರೂ ಅದನ್ನೂ ಸಹ ಲೋಕಾಯುಕ್ತ ಸ್ವತಂತ್ರವಾಗಿಯೇ ತನಿಖೆ ನಡೆಸುವ ಎಲ್ಲಾ ಅಧಿಕಾರವನ್ನು ಹೊಂದಿರುತ್ತದೆ ಎಂದರು.

ಉದಯವಾಣಿ

Write A Comment