ಮನೋರಂಜನೆ

ಅರ್ಬಾಜ್-ಮಲೈಕಾ ವಿಚ್ಛೇದನಕ್ಕೆ ಸಲ್ಮಾನ್ ಖಾನ್ ಕಾರಣ…!

Pinterest LinkedIn Tumblr

arbaaz-malaika

ಮುಂಬೈ: ಸಲ್ಮಾನ್ ಖಾನ್ ಕುಟುಂಬದ ಭಾಗವಾದ ಮಲೈಕಾ ಮತ್ತು ಅರ್ಬಾಜ್ ಖಾನ್ ದಂಪತಿ ಬೇರೆಯಾಗುತ್ತಿರುವ ವಿಚಾರ ಹಳೆಯದಾದರೂ, ಇವರ ವಿಚ್ಛೇದನಕ್ಕೆ ಕಾರಣ ಮಾತ್ರ ಬೆರಗು ಹುಟ್ಟಿಸುವಂತಿದೆ.

ಖಾಸಗಿ ಸಿನಿಮಾ ಪತ್ರಿಕೊಂದು ವರದಿ ಮಾಡಿರುವಂತೆ ಅರ್ಬಾಜ್ ಮತ್ತು ಮಲೈಕಾ ವಿಚ್ಛೇದನಕ್ಕೆ ಪರೋಕ್ಷವಾದಿ ಹಿರಿಯ ಅಣ್ಣ ಸಲ್ಮಾನ್ ಖಾನ್ ಅವರೇ ಕಾರಣವಂತೆ. ಅರ್ಬಾಜ್ ಖಾನ್ ಕುರಿತು ಸಾಕಷ್ಟು ವಿಚಾರಗಳಲ್ಲಿ ಮಲೈಕಾ ವೈಮನಸ್ಸು ಹೊಂದಿದ್ದು, ಪ್ರಮುಖವಾಗಿ ವೃತ್ತಿ ಜೀವನದಲ್ಲಿ ಏನೂ ಸಾಧನೆ ಮಾಡದ ಅರ್ಬಾಜ್ ವಿರುದ್ಧ ಮಲೈಕಾ ಸಾಕಷ್ಟು ಬಾರಿ ಅಸಮಾಧಾನಗೊಂಡಿದ್ದರಂತೆ. ಅಲ್ಲದೆ ಪ್ರತೀ ಬಾರಿ ಅಣ್ಣ ಸಲ್ಮಾನ್ ಖಾನ್ ಅವರ ಯಶಸ್ಸಿನ ನೆರಳಲ್ಲಿ ಬದುಕುವುದು ಮಲೈಕಾಗೆ ಸುತಾರಾಂ ಇಷ್ಟವಿರಲಿಲ್ಲವಂತೆ. ಇದೇ ಕಾರಣಕ್ಕೆ ದಂಪತಿಗಳ ನಡುವೆ ಆಗಾಗ್ಗೆ ಜಗಳಗಳು ಸಂಭವಿಸುತ್ತಿತ್ತು ಎಂದು ಪತ್ರಿಕೆ ವರದಿ ಮಾಡಿದೆ.

ಇನ್ನು ಸಾಕಷ್ಟು ಖಾಸಗಿ ಕಾರ್ಯಕ್ರಮಗಳಲ್ಲಿ ಸ್ನೇಹಿತರೊಂದಿಗೆ ಬೆರೆಯುತ್ತಿದ್ದ ಮಲೈಕಾ ತಮ್ಮ ಕುಟುಂಬದ ವಿಚಾರವಾಗಿ ನಟ ಸಲ್ಮಾನ್ ಖಾನ್ ವಿರುದ್ಧ ಹಲವು ಬಾರಿ ಅಸಮಾಧಾನ ವ್ಯಕ್ಚಪಡಿಸಿದ್ದರಂತೆ. ಮಲೈಕಾ ಅವರನ್ನು ಸಲ್ಲು ಕುಟುಂಬ ಹೊರಗಿನವರಂತೆ ನೋಡುತ್ತಿದ್ದರು ಮತ್ತು ಸ್ವತಃ ಸಲ್ಮಾನ್ ಖಾನ್ ಮಲೈಕಾ ಅವರು ತೊಡುತ್ತಿದ್ದ ವಸ್ತ್ರಗಳ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರಂತೆ. ಇದರಿಂದ ಮಲೈಕಾ ತೀವ್ರ ಬೇಸರಗೊಂಡಿದ್ದರಂತೆ. ಈ ಎಲ್ಲ ವಿಚಾರಗಳು ಇದೀಗ ಒಮ್ಮೆಲೆ ಸ್ಫೋಟಗೊಂಡಿದ್ದು, ಅರ್ಬಾಜ್ ಮತ್ತು ಮಲೈಕಾ ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

ಇನ್ನು ಸ್ವತಃ ಮಲೈಕಾ ಅವರ ವಿಚ್ಛೇದನವನ್ನು ಮಲೈಕಾ ಸಹೋದರಿ ಅಮೃತಾ ಆರೋರಾ ಸ್ಪಷ್ಟಪಡಿಸಿದ್ದು, ಸೋದರಿ ಮಲೈಕಾ ವಿಚ್ಛೇದನದ ವಿಚಾರವಾಗಿ ಚಿಂತನೆ ನಡೆಸಿದ್ದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಇಬ್ಬರು ಪರಸ್ಪರ ಬೇರೆ ಮನೆಯಲ್ಲಿ ವಾಸಿಸುತ್ತಿದ್ದು, ಈ ವಿಷಯವಾಗಿ ಒಮ್ಮತದ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಅರ್ಬಾಜ್ ಖಾನ್ ಸಹೋದರ ಸಲ್ಮಾನ್ ಖಾನ್ ಈ ವಿಚಾರವಾಗಿ ಇಬ್ಬರ ಸಮ್ಮುಖದಲ್ಲಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದಾಗಿ 17 ವರ್ಷದ ಸುಧೀರ್ಘ ವೈವಾಹಿಕ ಜೀವನಕ್ಕೆ ತೆರೆ ಬೀಳುವುದು ಬಹುತೇಕ ಖಚಿತವಾಗಿದೆ.

Write A Comment