ರಾಷ್ಟ್ರೀಯ

ಭಗತ್ ಸಿಂಗ್ ರಕ್ಷಣೆಗೆ ಯತ್ನಿಸಿದ್ದ ಮಹಾತ್ಮ ಗಾಂಧಿ..!

Pinterest LinkedIn Tumblr

Mahatma Gandhi And Bhagath Singh

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಅಂದಿನ ಬ್ರಿಟೀಷ್ ಸರ್ಕಾರ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ತಡೆಯಲು ಮಹಾತ್ಮ ಗಾಂಧಿ ಸಾಕಷ್ಟು ಪ್ರಯತ್ನಿಸಿದ್ದರು ಎಂದು ವರದಿಯೊಂದು ಹೇಳಿದೆ.

ಭಗತ್ ಸಿಂಗ್ ಅವರ 85ನೇ ಪುಣ್ಯತಿಥಿ ಸಂದರ್ಭದಲ್ಲಿ ಈ ವರದಿ ಹೊರಬಿದ್ದಿದ್ದು, ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ್ದ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರು ಅವರನ್ನು ಗಲ್ಲಿಗೇರಿಸಲಾಗಿತ್ತು. 1928ರಲ್ಲಿ ಭಗತ್ ಸಿಂಗ್ ನೇತೃತ್ವದಲ್ಲಿ ಸೈಮನ್ ಸಮಿತಿ ವಿರೋಧಿ ಚಳುವಳಿ ಹುಟ್ಟಿಕೊಂಡಿತ್ತು. ನೋಡನೋಡುತ್ತಿದ್ದಂತೆಯೇ ಈ ಚಳುವಳ ದೇಶಾದ್ಯಂತ ಹಬ್ಬಿತ್ತು. ಇದರ ಭಾಗವಾಗಿ 1928 ಅಕ್ಬೋಬರ್ 30ರಂದು ಲಾಲಾ ಲಜಪತ್ ರಾಯ್ ಲಾಹೋರ್ ನಲ್ಲಿ ಅತಿದೊಡ್ಡ ಪ್ರತಿಭಟನಾ ಚಳುವಳಿ ಹಮ್ಮಿಕೊಂಡಿದ್ದರು. ಇದು ಬ್ರಿಟೀಷ್ ಸರ್ಕಾರದ ತೀವ್ರ ಮುಜುಗರಕ್ಕೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿದ್ದ ಬ್ರಿಟೀಷ್ ಅಧಿಕಾರಿ ಜೆಎ ಸ್ಕಾಟ್ ಸೇರಿ ಹಲವು ಅಧಿಕಾರಿಗಳು ಮತ್ತು ಪೊಲೀಸರು ಲಾಲಾ ಲಜಪತ್ ರಾಯ್ ಅವನ್ನು ಮನಸೋ ಇಚ್ಛೆ ಥಳಿಸಿದ್ದರು. ಪೊಲೀಸ್ ದಾಳಿಯಲ್ಲಿ ಲಜಪತ್ ರಾಯ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು.

ಈ ವಿಚಾರ ಕಾಡ್ಗಿಚ್ಚಿನಂತ ದೇಶವ್ಯಾಪಿ ಹಬ್ಬಿತ್ತು. ಬ್ರಿಟೀಷ್ ಧೋರಣೆಯ ವಿರುದ್ಧ ಇಡೀ ದೇಶ ಆಕ್ರೋಶ ಭರಿತವಾಗಿತ್ತು. ಭಗತ್ ಸಿಂಗ್ ಕೂಡ ಬ್ರಿಟೀಷರ ವರ್ತನೆಯಿಂದ ತೀವ್ರ ಕ್ರೋಧಗೊಂಡಿದ್ದರು. ಬ್ರಿಟೀಷರು ಭಾರತೀಯರ ಮೇಲೆ ಇನ್ನು ಮುಂದೆ ಲಾಠಿ ಬೀಸಲು ಭಯಪಡಬೇಕು ಎನ್ನುವ ಉದ್ದೇಶದಿಂದ ಭಗತ್ ಸಿಂಗ್ ಅವರ ಹೆಚ್ ಎಸ್ ಆರ್ ಎ (ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಆರ್ಮಿ) ಸಂಘಟನೆ ಸೇಡಿನ ಕ್ರಮಕ್ಕೆ ಮುಂದಾಗಿತ್ತು. ಇದಕ್ಕಾಗಿ ಡಿಸೆಂಬರ್ 7ರಂದು ಭಗತ್ ಸಿಂಗ್, ರಾಜ್ ಗುರು, ಚಂದ್ರಶೇಖರ ಅಜಾದ್ ಮತ್ತು ಸುಖದೇವ್ ಅವರು ಲಾಲಾ ಲಜಪತ್ ರಾಯ್ ಅವರ ಮೇಲೆ ಹಲ್ಲೆ ಮಾಡಿದ್ದ ಜೆಪಿ ಸ್ಕೂಟ್ ಅವರ ತಲೆಗೆ ಗುಂಡು ಹಾರಿಸಿ ಕೊಂದು ಹಾಕಿದ್ದರು.

ಇದಾದ ಕೆಲವೇ ತಿಂಗಳ ಅಂತರದಲ್ಲಿ ಮತ್ತೆ ಭಗತ್ ಸಿಂಗ್ ಸಮೂಹ 1929ರಂದು ಏಪ್ರಿಲ್ 8ರಂದು ದೆಹಲಿಯ ಬ್ರಿಟೀಷರ ಕೇಂದ್ರೀಯ ಶಾಸಕಾಂಗ ಭವನದ ಮೇಲೆ ಬಾಂಬ್ ಎಸೆಯಲು ನಿರ್ಧರಿಸಿದ್ದರು. ಆದರೆ ಬಾಂಬ್ ದಾಳಿಯಲ್ಲಿ ಯಾರಿಗೂ ತೊಂದರೆಯಾಗಬಾರದು ಕೇವಲ ಗಮನ ಸೆಳೆಯುವ ಉದ್ದೇಶದಿಂದ ಮಾತ್ರ ಈ ಕೃತ್ಯ ಎಸೆಯಲು ಭಗತ್ ಸಿಂಗ್, ಭಟುಕೇಶ್ವರ್ ಅವರು ನಿರ್ಧರಿಸಿದ್ದರು. ಅಲ್ಲದೆ ಬಾಂಬ್ ಎಸೆದ ಬಳಿಕ ಪರಾರಿಯಾಗದಿರಲು ನಿರ್ಧರಿಸಿದ್ದ ಇವರು ಬ್ರಿಟೀಷರಿಗೆ ಶರಣಾಗಿದ್ದರು.

ಇಬ್ಬರನ್ನೂ ಬಂಧಿಸಿದ್ದ ಬ್ರಿಟೀಷ್ ಅಧಿಕಾರಿಗಳು ಭಟುಕೇಶ್ವರ್ ಗೆ ಆಜೀವ ಜೈಲು ಶಿಕ್ಷೆ ವಿಧಿಸಿದ್ದರೆ, ಲಾಹೋರ್ ಪ್ರಕರಣ ಸಂಬಂಧ ಭಗತ್ ಸಿಂಗ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು. ಜೈಲಿಗೆ ತೆರಳಿದ್ದ ಭಗತ್ ಸಿಂಗ್ ಜೈಲಿನಲ್ಲಿದ್ದ ಭಾರತೀಯ ಕೈದಿಗಳ ಸ್ಥಿತಿಯನ್ನು ಕಂಡು ಜೈಲಿನ ಸುಧಾರಣೆಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಸತ್ಯಾಗ್ರಹವನ್ನು ಭಗತ್ ಸಿಂಗ್ ಮತ್ತು ತಂಡ ಕೈಬಿಟ್ಟಿರಲಿಲ್ಲ. ಈ ನಡುವೆ ಜೈಲಿಗೆ ಆಗಮಿಸಿದ್ದ ಜವಾಹರ್ ನೆಹರೂ ಅವರೂ ಕೂಡ ಭಗತ್ ಸಿಂಗ್ ಅವರಿಗೆ ಉಪವಾಸವನ್ನು ಕೈಬಿಡಲು ಮನವಿ ಮಾಡಿದ್ದರಾದರೂ, ಭಗತ್ ಸಿಂಗ್ ಮಾತ್ರ ಯಾರ ಮನವಿಯನ್ನೂ ಪುರಸ್ಕರಿಸರಲಿಲ್ಲ.

ಈ ವಿಚಾರವನ್ನು ಸ್ವತಃ ನೆಹರೂ ಅವರು ತಮ್ಮ ಜೀವನ ಚರಿತ್ರೆಯಲ್ಲಿ ಬರೆದುಕೊಂಡಿದ್ದರು. ಕೊನೆಗೆ ಸ್ವತಃ ಭಗತ್ ಸಿಂಗ್ ಅವರ ತಂದೆ ಕಾಂಗ್ರೆಸ್ ಪಕ್ಷ ನಿರ್ಣಯದೊಂದಿಗೆ ಜೈಲಿಗೆ ಆಗಮಿಸಿ, ಮನವಿ ಮಾಡಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ತಿಳಿದಿದ್ದ ಭಗತ್ ಸಿಂಗ್ ಉಪವಾಸ ಸತ್ಯಗ್ರಹವನ್ನು ಕೈಬಿಟ್ಟಿದ್ದರು. ಮತ್ತೊಂದೆಡೆ ಬ್ರಿಟೀಷ್ ಸರ್ಕಾರ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿತ್ತು. ಈ ವಿಚಾರ ತಿಳಿದಿದ್ದ ಗಾಂಧಿ ಭಗತ್ ಸಿಂಗ್ ಮತ್ತವರ ಸಂಗಡಿಗರ ಗಲ್ಲು ಶಿಕ್ಷೆಯನ್ನು ತಡೆಯವ ಪ್ರಯತ್ನ ಮಾಡಿದರು. ಹಿರಿಯ ಬ್ರಿಟೀಷ್ ಅಧಿಕಾರಿ ಇರ್ವಿನ್ ರನ್ನು ಮಾರ್ಚ್ 19ರಂದು ಭೇಟಿ ಮಾಡಿದ್ದ ಚರ್ಚಿಸಿದ್ದ ಗಾಂಧಿ ಭಗತ್ ಸಿಂಗ್ ಅವರ ಗಲ್ಲು ಶಿಕ್ಷೆಯನ್ನು ಮುಂದೂಡುವಂತೆ ಮನವಿ ಮಾಡಿದ್ದರು.

ಆದರೆ ಗಾಂಧಿ ಅವರ ಮನವಿಯ ನಡುವೆಯೂ ಬ್ರಿಟೀಷ್ ಸರ್ಕಾರ 1931ರ ಮಾರ್ಚ್ 23ರಂದು ಭಗತ್ ಸಿಂಗ್ ಮತ್ತು ಅವರ ಸಂಗಡಿಗರನ್ನು ಗಲ್ಲಿಗೇರಿಸಿತ್ತು. ಹೀಗಾಗಿ ಗಾಂಧಿ ಅವರ ಪ್ರಯತ್ನ ಫಲಿಸದೇ ಹೋಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

Write A Comment