ಮನೋರಂಜನೆ

ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯಕ್ಕು ಮುನ್ನ ಭಾರಿ ಮಳೆ, ಪಂದ್ಯ ನಡೆಯುವ ಬಗ್ಗೆ ಆತಂಕ

Pinterest LinkedIn Tumblr

Indo-Pak1_T20

ಕೋಲ್ಕತಾ: ವಿಶ್ವಕಪ್ ಟಿ20 ಟೂರ್ನಿ ಆರಂಭವಾದ ದಿನದಿಂದಲೂ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಭಾರತ – ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯ ಶನಿವಾರ ಸಂಜೆ ರಂಭವಾಗಲಿದ್ದು, ಪಂದ್ಯಕ್ಕು ಮುನ್ನ ಕೋಲ್ಕತಾದಲ್ಲಿ ಭಾರಿ ಮಳೆ ಸುರಿದಿದ್ದು, ಪಂದ್ಯ ನಡೆಯುವ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ.

ಐತಿಹಾಸಿಕ ಈಡನ್‌ ಗಾರ್ಡನ್ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ರೋಚಕ ಪಂದ್ಯ ನಡೆಯುತ್ತಿದ್ದು, ಕ್ರೀಡಾಂಗಣದ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ಅಲ್ಲದೆ ಈಗಲೂ ತುಂತುರು ಸುರಿಯುತ್ತಿದೆ. ಮಳೆಯಿಂದ ರಕ್ಷಿಸಲು ಕ್ರೀಡಾಂಗಣವನ್ನು ಸಂಪೂರ್ಣ ಟಾರ್ಪಲ್ ನಿಂದ ಮುಚ್ಚಲಾಗಿದೆ.

ರಾತ್ರಿ 7.30ರಿಂದ ಆರಂಭವಾಗಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಅಭಿಮಾನಿಗಳು ಯುದ್ಧದ ಮಹತ್ವ ಕೊಡುತ್ತಾರೆ. ಆ ನಿಟ್ಟಿನಲ್ಲಿ ಇದು ಹೈವೋಲ್ಟೇಜ್ ಪಂದ್ಯವಾಗಿದೆ. ಇನ್ನು ಮಳೆ ನಿಂತರೆ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿದೆ ಎಂದು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ.

Write A Comment