ಮನೋರಂಜನೆ

ಮಹೇಂದ್ರ ಸಿಂಗ್ ಧೋನಿಯ ಹಮ್ಮರ್ ಕಾರನ್ನು ಸ್ಕಾರ್ಪಿಯೋ ಮಾಡಿದ ಸಾರಿಗೆ ಇಲಾಖೆ

Pinterest LinkedIn Tumblr

Hummer_H2

ರಾಂಚಿ: ರಾಂಚಿ ಸಾರಿಗೆ ಇಲಾಖೆ ಮಾಡಿದ ಯಡವಟ್ಟಿನಿಂದ ಭಾರತೀಯ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಹೊಸತಾಗಿ ಕಾರಿನ ತೆರಿಗೆ ಹಾಗೂ ದಂಡ ತೆರಬೇಕಾದ ಪರಿಸ್ಥಿತಿ ಬಂದೊದಗಿದೆ.

ಧೋನಿಯ ಹೊಸ ಹಮ್ಮರ್ ಎಚ್-2 ಲಕ್ಷುರಿ ಕಾರನ್ನು ಸಾರಿಗೆ ಇಲಾಖೆ ಸ್ಕಾರ್ಪಿಯೋ ಎಂದು ನೋಂದಣಿ ಮಾಡಿ ಯಡವಟ್ಟು ಮಾಡಿದೆ.

ಸ್ಕಾರ್ಪಿಯೋ ಎಂದು ನೋಂದಣಿ ಮಾಡಿದ್ದಕ್ಕೆ ಧೋನಿಗೆ 53 ಸಾವಿರ ರೂಪಾಯಿ ನೋಂದಣಿ ಶುಲ್ಕ ಕಟ್ಟಲು ಹೇಳಲಾಗಿತ್ತು. ಆದರೆ ಹಮ್ಮರ್ ಕಾರಿಗೆ 4 ಲಕ್ಷ ರು ಕಟ್ಟಬೇಕಿತ್ತು.

ಧೋನಿ ಈಗಾಗಲೇ 2010 ರವರೆಗಿನ ತೆರಿಗೆ ಕಟ್ಟಿದ್ದಾರೆ. ನಿಯಮ ಪ್ರಕಾರ ಅವರು ಹಮ್ಮರ್ ಕಾರಿಗೆ ಒಂದು ಬಾರಿಯ ತೆರಿಗೆ ಮತ್ತು ದಂಡ ಕಟ್ಟಬೇಕು ಎಂದು ರಾಂಚಿಯ ಸಾರಿಗೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಹಮ್ಮರ್ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆದ್ದರಿಂದ ಟೆಪಿಸ್ಟ್ ಗೆ ಸಿದ್ದ ಪಟ್ಟಿಯಲ್ಲಿ ಆ ವಾಹನದ ಹೆಸರು ಸಿಗಲಿಲ್ಲ. ವಾಹನ ಯಾವುದೆಂದೂ ಕಂಪ್ಯೂಟರ್ ನಲ್ಲಿ ನಮೂದಿಸದೇ ಮಂದೆ ಹೋಗಲು ಸಾಧ್ಯವಿಲ್ಲ. ಹೀಗಾಗೀ ಟೈಪಿಸ್ಟ್ ಸ್ಕಾರ್ಪಿಯೋ ಎಂದು ಹಾಕಿದ್ದಾನೆ. ಇದು ಟೈಪಿಂಗ್ ಮಿಸ್ಟೇಕ್ ಎಂದು ಸಾರಿಗೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Write A Comment