ರಾಷ್ಟ್ರೀಯ

ಪೊಲೀಸ್ ಕುದುರೆ ‘ಶಕ್ತಿಮಾನ್’ ಕಾಲು ಮುರಿದಿದ್ದ ಶಾಸಕ ಗಣೇಶ್ ಜೋಷಿ ಅರೆಸ್ಟ್

Pinterest LinkedIn Tumblr

uttarkand

ಡೆಹರಾಡೂನ್: ಉತ್ತರಾಖಂಡ ಸಿಎಂ ವಿರುದ್ಧದ ಪ್ರತಿಭಟನೆಯ ವೇಳೆ ಪೊಲೀಸ್ ಕುದುರೆ ‘ಶಕ್ತಿಮಾನ್’ ಕಾಲಿಗೆ ಪೊಲೀಸ್ ಲಾಠಿಯಿಂದ ಹೊಡೆದು ಕಾಲು ಮುರಿದಿದ್ದ ಬಿಜೆಪಿ ಶಾಸಕ ಗಣೇಶ್ ಜೋಷಿಯನ್ನು ಘಟನೆ ನಡೆದು ಮೂರುದಿನಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೋಮವಾರ ನಡೆದ ಪ್ರತಿಭಟನೆಯ ವೇಳೆ ಆಕ್ರೋಶ ಪ್ರದರ್ಶಿಸಿದ ಗಣೇಶ್ ಜೋಷಿಯನ್ನು ಪೊಲೀಸರು ತಡೆಯಲು ಯತ್ನಿಸಿದಾಗ ಕೆಂಡಾಮಂಡಲಗೊಂಡು ಪೊಲೀಸ್ ಲಾಠಿಯನ್ನೇ ಕಿತ್ತುಕೊಂಡು ಕುದುರೆಯ ಕಾಲು ಮುರಿಯುವ ಮಟ್ಟಕ್ಕೆ ಹೊಡೆದಿದ್ದರು. ತೀವ್ರ ಗಾಯಕ್ಕೆ ತುತ್ತಾದ ಕುದುರೆ ಅಲ್ಲಿಯೇ ಕುಸಿದು ಬಿದ್ದಿತ್ತು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಆದರೆ ಜೋಡಿಸುವ ಮಟ್ಟಕ್ಕೆ ಇಲ್ಲದ ಕಾರಣ ಕಾಲನ್ನೇ ಕತ್ತರಿಸಿ ಕೃತಕ ಕಾಲು ಜೋಡಿಸಲಾಗಿದೆ.

ಹತ್ತು ಮಂದಿ ವೈದ್ಯರು ಕುದುರೆಯ ಕಾಲು ಜೋಡಣೆಗೆ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಶಕ್ತಿಮಾನ್ ಈ ಮೊದಲಿನಂತೆ ಓಡಲು ಅಥವಾ ವೇಗದ ನಡಿಗೆ ಸಾಧ್ಯವೇ ಇಲ್ಲ ಎಂದಿದ್ದಾರೆ.

14 ವರ್ಷ ಪ್ರಾಯದ ಕುದುರೆಯ ಕಾಲನ್ನೇ ಕತ್ತರಿಸುವ ಮಟ್ಟಕ್ಕೆ ಹೊಡೆದಿದ್ದ ಗಣೇಶ್ ಜೋಷಿ ವಿರುದ್ಧ ಪ್ರಾಣಿ ದಯಾ ಸಂಘಟನೆಗಳು ಪ್ರಕರಣ ದಾಖಲಿಸಿದ್ದವು.

Write A Comment