ರಾಷ್ಟ್ರೀಯ

ಸಲಿಂಗಕಾಮ ಅಪರಾಧವಲ್ಲ: ಆರೆಸ್ಸೆಸ್

Pinterest LinkedIn Tumblr

RSS1

ನವದೆಹಲಿ: ಲೈಂಗಿಕತೆ ವ್ಯಕ್ತಿಗಳ ವೈಯಕ್ತಿಕ ವಿಚಾರವಾಗಿದ್ದು, ಸಲಿಂಗಕಾಮ ಅಪರಾಧವಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರೆಸ್ಸೆಸ್ಸ್ ) ಹೇಳಿದೆ.

ರಾಷ್ಟ್ರದ ರಾಜಧಾನಿಯಲ್ಲಿ ಗುರುವಾರ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್ 2016 ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಆರೆಸ್ಸ್‌ಸ್ ಜತೆ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಈ ರೀತಿಯ ಸುಧಾರಣಾ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಬೇರೆಯವರ ಜೀವನದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗದ ಸಲಿಂಗ ಲೈಂಗಿಕತೆಯ ಆಯ್ಕೆ ವೈಯಕ್ತಿಕ ವಿಚಾರವಾಗಿದ್ದು, ಅದು ಅಪರಾಧವಲ್ಲ ಎಂದು ದತ್ತಾತ್ರೇಯ ಅವರು ಟ್ವೀಟ್ ಮಾಡಿದ್ದಾರೆ.

ಅದೇ ವೇಳೆ ಸಲಿಂಗ ಕಾಮಕ್ಕೆ ಸಂಬಂಧಿಸಿದಂತೆ ಇರುವ ವಸಾಹತು ಕಾಲದ ಕಾನೂನಿನ ಕುರಿತು ಸರ್ಕಾರ ಮರು ಚಿಂತನೆ ನಡೆಸುವ ಮತ್ತು ಅದನ್ನು ತೆಗೆದು ಹಾಕುವ ನಿರೀಕ್ಷೆಯನ್ನು ಆರೆಸ್ಸೆಸ್ಸ್ ವ್ಯಕ್ತ ಪಡಿಸಿದೆ.

ಸುಪ್ರೀಂ ಕೋರ್ಟ್ ಸಲಿಂಗ ಕಾಮ ವಿಚಾರದಲ್ಲಿ ಸಂಪ್ರದಾಯವಾದಿ ನಿಲುವು ತಾಳಿದೆ. ಆದರೆ ಲಕ್ಷಾಂತರ ಜನ ಸಲಿಂಗ ಕಾಮ ಬಯಸುವಾಗ ಅದನ್ನು ಹತ್ತಿಕ್ಕಲಾಗದು. ಹೀಗಾಗಿ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಬಹುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು.

ಭಾರತೀಯ ದಂಡ ಸಂಹಿತೆ 377 ಸೆಕ್ಷನ್ ಪ್ರಕಾರ ಭಾರತದಲ್ಲಿ ಸಲಿಂಗಕಾಮ ಅಪರಾಧವಾಗಿದೆ.

Write A Comment