ರಾಷ್ಟ್ರೀಯ

ಸೋನಿಯಾ, ರಾಹುಲ್ ಜತೆಗೆ ಉತ್ತಮ ಬಾಂಧವ್ಯವಿಲ್ಲ: ಅಮಿತ್ ಶಾ

Pinterest LinkedIn Tumblr

Amit Shah

ದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್‌ಗಾಂಧಿ ಜತೆ ನನಗೆ ಉತ್ತಮ ಬಾಂಧವ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ನಮ್ಮ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂಬುದು ನಿಜ. ನನಗೆ ಸಂಬಂಧಪಟ್ಟಂತೆ ನಮ್ಮ ನಡುವೆ ಒಳ್ಳೆಯ ಬಾಂಧವ್ಯವಿಲ್ಲ. ಅವರು ಈ ಬಗ್ಗೆ ಏನು ಹೇಳುತ್ತಾರೋ ಅದು ನನಗೆ ಗೊತ್ತಿಲ್ಲ ಎಂದು ಶಾ ಹೇಳಿದ್ದಾರೆ.

ಭಾರತವನ್ನು ಕಾಂಗ್ರೆಸ್ ಮುಕ್ತವಾಗಿರಿಸುವುದೇ ನಮ್ಮ ಗುರಿ. ಕೆಲವು ರಾಜ್ಯಗಳ ಚುನಾವಣೆ ಫಲಿತಾಂಶವೂ ಇದಕ್ಕೆ ಪೂರಕವಾಗಿದೆ.

ಅದೇ ವೇಳೆ ಜೆಎನ್‌ಯು ವಿವಾದದ ಬಗ್ಗೆ ಮಾತು ಹೊರಳಿದಾಗ, ಅಫ್ಜಲ್ ಗುರುವಿಗೆ ಯಾರು ಜೈಕಾರ ಕೂಗಿದ್ದಾರೆ ಎಂಬುದು ಮುಖ್ಯವಲ್ಲ, ಆದರೆ ಆ ಕಾರ್ಯಕ್ರಮ ದೇಶ ವಿರೋಧಿಯಾಗಿತ್ತು ಎಂದು ಶಾ ಅಭಿಪ್ರಾಯ ಪಟ್ಟಿದ್ದಾರೆ.

ಬಿಜೆಪಿ ಮುಖಂಡರ ಬಗ್ಗೆ ಅಥವಾ ಸರ್ಕಾರ ವಿರುದ್ಧ ಘೋಷಣೆ ಕೂಗಲಿ. ನಾವು ಅದನ್ನು ಸಹಿಸುತ್ತೇವೆ. ಆದರೆ ದೇಶ ವಿರೋಧಿ ಘೋಷಣೆ ಕೂಗಿದರೆ ನಾವು ಅದನ್ನು ಸಹಿಸುವುದಿಲ್ಲ.

ಏತನ್ಮಧ್ಯೆ, ಜೆಎನ್‌ಯುಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಮೋದಿ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ಯವನ್ನು ಹತ್ತಿಕ್ಕುತ್ತಿದೆ ಎಂದು ದೂರಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತುಳಿಯಲಾಗುತ್ತಿದೆಎಂದ ರಾಹುಲ್ ಅವರ ಆ ಮಾತನ್ನು ನಾನು ಖಂಡಿಸುತ್ತೇನೆ.

ಆದರೆ, ಜೆಎನ್‌ಯುನಲ್ಲಿ ನಡೆದ ಅಫ್ಜಲ್ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದೇ ಆದರೆ ಅದನ್ನು ಸದ್ದಡಗಿಸುವ ಅಗತ್ಯವಿದೆ ಎಂದು ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ.

Write A Comment