
ಇಂದೂರು: ಭಾರತ- ನ್ಯೂಜಿಲೆಂಡ್ ನಡುವೆ ವಿಶ್ವ ಕಪ್ ಟಿ-೨೦ ಟೂರ್ನಿ ಆರಂಭವಾವಾದಾಗ ಎಲ್ಲರೂ ಭಾರತ ಗೆದ್ದೇ ತೀರುತ್ತದೆ ಎಂದೇ ಭಾವಿಸಿದ್ದರು. ಆದರೆ ಭಾರತ ೪೭ ರನ್‌ಗಳಿಂದ ನ್ಯೂಜಿಲೆಂಡ್ ವಿರುದ್ಧ ಸೋತಿತು.
ಅಂದರೆ ಉಳಿದ ಮೂರು ಪಂದ್ಯಗಳಲ್ಲಿ ಭಾರತ ಗೆಲ್ಲಲೇ ಬೇಕೆಂದಾಯಿತು. ಆದರೆ ಅದು ಹೇಳುವಷ್ಟು ಸುಲಭದ ಕೆಲಸವಲ್ಲ. ಮಳೆಯಿಂದಾಗಿ ಯಾವುದೇ ಒಂದು ಪಂದ್ಯ ರದ್ದಾದರೂ ಅದು ಭಾರತಕ್ಕೆ ಹೊಡೆತವೇ. ರನ್ ರೇಟ್ ಲೆಕ್ಕಾಚಾರದಲ್ಲೂ ಭಾರತ ಮುಂದಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಒಂದೇ ಸಮನೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆಲ್ಲಬೇಕೆಂದರೆ ನಿನ್ನೆ ತೋರಿದ ಪ್ರದರ್ಶನಕ್ಕಿಂತ ಭಾರತ ಇನ್ನೂ ಎಷ್ಟೋ ಪಾಲು ಉತ್ತಮ ಆಟ ಆಡಬೇಕಾಗುತ್ತದೆ.
ಹೌದು ಈ ಮೂರು ದೇಶಗಳಿಗಿಂತ ಟಿ-೨೦ ಯಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ಆದರೆ ಈವರೆಗೆ ಚುಟುಕು (ಟಿ-೨೦) ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಈವರೆಗೆ ಗೆದ್ದೇ ಇಲ್ಲ!
ನ್ಯೂಜಿಲೆಂಡ್ ವಿರುದ್ಧ ಹೀಗೆ ಸೋತ ಭಾರತ ಟೂರ್ನಿಯ ಸೆಮಿಫೈನಲ್ಲನ್ನಾದರೂ ಪ್ರವೇಶಿಸುವುದೆ? ಎಂಬ ಶಂಕೆ ಸಹಜವಾಗಿ ಎದ್ದಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಭಾರತ ಹೇಗೆ ಆಡಲಿದೆ ಎಂಬುದನ್ನು ಅದು ಅವಲಂಬಿಸಿದೆ.