ಅಂತರಾಷ್ಟ್ರೀಯ

ಜೀವ ರಕ್ಷಿಸಿದವನಿಗಾಗಿ 8 ಸಾವಿರ ಕಿಮೀ ದೂರದಿಂದ ಬರುತ್ತೆ ಪೆಂಗ್ವಿನ್

Pinterest LinkedIn Tumblr

penguin4

ಡಿಂಡಿಮ್ ಎಂಬ ಪಂಗ್ವಿನ್ ತನ್ನ ಜೀವ ಉಳಿಸಿದ ವ್ಯಕ್ತಿಯನ್ನು ಭೇಟಿ ಮಾಡಲೆಂದು ಪ್ರತಿ ವರ್ಷ ದಕ್ಷಿಣ ಅಮೆರಿಕದಿಂದ ಸುಮಾರು ೮ ಸಾವಿರ ಕಿಮೀ ಪ್ರಯಾಣಿಸಿ ಬ್ರೆಜಿಲ್‌ನ ರಿಯೋ ಡಿ ಜನೈರೊಗೆ ಬರುತ್ತದೆ.

ಇಲ್ಲಿನ ಮೀನುಗಾರರಾಗಿರುವ ೭೧ ವರ್ಷದ ಪೆರೇರಾ ಡಿಸೋಜಾ ಎಂಬವರು ೨೦೧೧ರಲ್ಲಿ ಎಣ್ಣೆಯಲ್ಲಿ ಮುಳುಗಿ ಸಾವಿನ ಅಂಚಿನಲ್ಲಿದ್ದ ಈ ಪೆಂಗ್ವಿನ್ ಹಕ್ಕಿಯನ್ನು ಪಾರು ಮಾಡಿದ್ದರು. ಪೆಂಗ್ವಿನ್‌ನ ಮೈಯಿಂದ ಎಣ್ಣೆಯನ್ನ ತೆಗೆದು ನಂತರ ಅದಕ್ಕೆ ಪ್ರತಿದಿನ ಎರಡು ಮೀನನ್ನು ಆಹಾರವಾಗಿ ನೀಡುತ್ತಿದ್ದರು. ಇದಕ್ಕೆ ಡಿಂಡಮ್ ಎಂಬ ಹೆಸರನ್ನೂ ಇಟ್ಟಿದ್ದರು. ಪೆಂಗ್ವಿನ್ ಗುಣಮುಖವಾದ ನಂತರ ಅದನ್ನು ಸಮುದ್ರಕ್ಕೆ ಬಿಟ್ಟರೂ ಅದು ಅಲ್ಲಿಂದ ಹೊಗಲು ನಿರಾಕರಿಸಿ ೧೧ ತಿಂಗಳ ಕಾಲ ಡಿಸೋಜಾ ಅವರ ಜೊತೆಯಲ್ಲೇ ಇತ್ತು.

ಅನಂತರ ಡಿಸೋಜಾ ಮೀನುಗಾರಿಕೆಗಾಗಿ ಮತ್ತೊಂದು ಕಡಲ ತೀರಕ್ಕೆ ಹೋದಾಗ ಪೆಂಗ್ವಿನ್ ನಾಪತ್ತೆಯಾಗಿತ್ತು. ಬಹುಶಃ ಅದು ತನ್ನ ಮೂಲ ಸ್ಥಳಕ್ಕೆ ಹೋಗಿರಬೇಕು ಎಂದುಕೊಂಡಿದ್ದ ಡಿಸೋಜಾ ಕೆಲವು ತಿಂಗಳ ನಂತರ ಪೆಂಗ್ವಿನ್ ವಾಪಸಾಗಿದ್ದನ್ನು ನೋಡಿ ಅಚ್ಚರಿಗೊಂಡಿದ್ದರು.

ಅಂದಿನಿಂದ ಪ್ರತಿ ವರ್ಷ ಈ ಪೆಂಗ್ವಿನ್ ತನ್ನ ಜೀವ ಉಳಿಸಿ ಮರುಜನ್ಮ ನೀಡಿದ್ದ ಡಿಸೋಜಾ ಅವರನ್ನು ನೋಡಲು ೮ ಸಾವಿರ ಕಿಮೀ ದೂರದಿಂದ ಬರುತ್ತದೆ. ಜೂನ್‌ನಲ್ಲಿ ಡಿಸೋಜಾರ ಭೇಟಿಗೆ ಬಂದು ಫೆಬ್ರವರಿಯಲ್ಲಿ ಹಿಂದಿರುಗುತ್ತದೆ. ಉಳಿದಂತೆ ಈ ಪೆಂಗ್ವಿನ್ ಅರ್ಜೆಂಟಿನಾ ಮತ್ತು ಚಿಲಿಯ ಸಮುದ್ರ ತೀರದಲ್ಲಿ ವಾಸಿಸುತ್ತದೆ.

Write A Comment