ಮನೋರಂಜನೆ

ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಜೊತೆ ರಣಬೀರ್ ಕಪೂರ್ ಡೇಟಿಂಗ್

Pinterest LinkedIn Tumblr

Arjun Kapoor And  Athiya Shetty

ಮುಂಬಯಿ: ನಟ ಅರ್ಜುನ್ ಕಪೂರ್ ಮತ್ತು ಹಿರಿಯ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರಂತೆ. ಇತ್ತೀಚೆಗೆ ಈ ಯುವ ಜೋಡಿ ಹಲವಾರು ಕಡೆ ಜೊತೆ ಜೊತೆಯಾಗಿ ಓಡಾಡುತ್ತಿದ್ದಾರೆ ಎನ್ನುವುದು ಬಾಲಿವುಡ್ ಅಂಗಳದಲ್ಲಿ ಚರ್ಚಿತವಾಗುತ್ತಿರುವ ವಿಷಯ.

ನಿರ್ದೇಶಕ ಪುನೀತ್‌ ಮಲ್ಹೋತ್ರ ಪಾರ್ಟಿಯಲ್ಲಿ ಈ ಜೋಡಿಗಳ ಡೇಟಿಂಗ್‌ ಜೋರಾಗಿಯೇ ನಡೆದಿತ್ತಂತೆ. ಈ ಪಾರ್ಟಿಯಲ್ಲಿ ನಟಿ ಸೋನಾಕ್ಷಿ ಸಿನ್ಹಾ ಕೂಡ ಪಾಲ್ಗೊಂಡಿದ್ದರು. ಆದರೆ ಅರ್ಜುನ್ ಕಪೂರ್ ಅವರನ್ನು ಭೇಟಿ ಮಾಡಲು ಅವರು ಇಷ್ಟ ಪಡಲಿಲ್ಲವಂತೆ.

ಸದ್ಯಕ್ಕೆ ‘ಕಿ ಅಂಡ್‌ ಕಾ’ ಚಿತ್ರದ ಮೂಲಕ ಸುದ್ದಿಯಲ್ಲಿರೋ ಅರ್ಜುನ್‌ ಕಪೂರ್‌, ನಟ ಸುನೀಲ್‌ ಶೆಟ್ಟಿ ಮಗಳಾದ ಆತಿಯಾ ಶೆಟ್ಟಿ ಜೊತೆ ಲವ್ವು ಗಿವ್ವು ಅಂತ ಕಾಲ ಕಳೆಯುತ್ತಿದ್ದಾರಂತೆ. ಸಲ್ಮಾನ್‌ ಖಾನ್‌ ನಿರ್ಮಿಸಿದ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ ಆತಿಯಾ ಅರ್ಜುನ್‌ ಜೊತೆ ಡೇಟಿಂಗ್ ನಡೆಸಿದ್ದಾಳಂತೆ. ಆದರೆ ಈ ಜೋಡಿ ಮಾತ್ರ ಈವರೆಗೆ ಯಾವುದೇ ಕಮೆಂಟ್ ನೀಡಿಲ್ಲ.

Write A Comment