
ಮುಂಬಯಿ: ನಾನು ಮನೆಯಲ್ಲಿ ಬೇಡವಾದ ಮಗುವಾಗಿದ್ದೆ ಎಂದು ಮಹಿಳಾ ದಿನಾಚರಣೆಯಂದು ನಟಿ ಕಂಗನಾ ರಣಾವತ್ ಹೇಳಿಕೆ ನೀಡಿದ್ದ ಬೆನ್ನಲ್ಲೆ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಕಂಗನಾ ಹುಟ್ಟಿದಾಗ ಮನೆಯಲ್ಲಿ ಒಂದು ಸಣ್ಣ ಆಚರಣೆ ಕೂಡ ಮಾಡಿರಲಿಲ್ಲ. ಒಬ್ಬರಿಗೂ ಸಿಹಿಯನ್ನು ಹಂಚಿರಲಿಲ್ಲ. ತಮ್ಮ ಸ್ವಗ್ರಾಮದಲ್ಲಿ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಹೀನ ಭಾವನೆಯಿತ್ತು. ಹೀಗಾಗಿ ಕಂಗನಾ ಮನೆಯಲ್ಲಿ ಬೇಡವಾದ ಮಗುವಾಗಿ ಬೆಳೆದಳು ಎಂದು ಆಕೆಯ ತಂದೆ ಅಮರ್ ದೀರ್ ರಾಣಾವತ್ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ತಮ್ಮ ಗ್ರಾಮದಲ್ಲಿ ಅಂದು ಕಂಗನಾ ಹುಟ್ಟಿದಾಗ ಸಂತೋಷ ಇರಲಿಲ್ಲ. ಸ್ಮಶಾನ ಮೌನ ಆವರಿಸಿತ್ತು. ಮನೆಗೆ ಬಂದವರೆಲ್ಲಾ ಮತ್ತೆ ಹೆಣ್ಣು ಮಗು ಹುಟ್ಟಿದೆ ಎಂದು ಮೂಗು ಮುರಿಯುತ್ತಿದ್ದರು ಎಂದು ಅಮರ್ ದೀಪ್ ರಣಾವತ್ ಹೇಳಿದ್ದಾರೆ.
ಮಗನನ್ನು ಕಳೆದು ಕೊಂಡಿದ್ದ ದುಃಖದಲ್ಲಿದ್ದ ನಮಗೆ ಮತ್ತೆ ಗಂಡು ಮಗು ಜನಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಮತ್ತೆ ಹೆಣ್ಣು ಮಗು ಜನಿಸಿದ್ದು ನಮಗೆ ಸಂತಸ ತಂದಿರಲಿಲ್ಲ ಎಂದು ಹೇಳಿದ್ದಾರೆ.
ತನ್ನ ಅಕ್ಕ ರಂಗೋಲಿ ಹುಟ್ಟಿದಾಗ ಮನೆಯಲ್ಲಿ ಸಂಭ್ರಮಾಚರಣೆ ನಡೆದಿತ್ತು. ಆದರೆ ನಾನು ಹುಟ್ಟಿದಾಗ ಎಲ್ಲರಿಗೂ ಬೇಸರವಾಗಿತ್ತು. ಹೀಗಾಗಿ ನಾನು ಮನೆಯಲ್ಲಿ ಬೇಡವಾದ ಮಗುವಾಗಿ ಬೆಳೆದೆ ಎಂದು ಕಂಗನಾ ಬೇಸರ ವ್ಯಕ್ತ ಪಡಿಸಿದ್ದರು