ರಾಷ್ಟ್ರೀಯ

ಗುಜರಾತಿನಲ್ಲಿ ಕುಸಿಯುತ್ತಿದೆ ಮಹಿಳೆಯರ ಸಂಖ್ಯೆ!

Pinterest LinkedIn Tumblr

07-sex-ration-1-webಅಹಮದಾಬಾದ್: 2001ರಿಂದ 2011ರವರೆಗಿನ ಹತ್ತು ವರ್ಷಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಲಿಂಗಾನುಪಾತ ಹೆಚ್ಚಿದ್ದರೂ, ಗುಜರಾತಿನಲ್ಲಿ ಅದು 920ರಿಂದ 919ಕ್ಕೆ ಕುಸಿದಿದೆ ಎಂದು 2015-16ರ ಸಾಮಾಜಿಕ ಆರ್ಥಿಕ ಮರುಪರಿಶೀಲನಾ ವರದಿಯು ತಿಳಿಸಿದೆ. ವರದಿಯನ್ನು ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ರಾಷ್ಟ್ರಮಟ್ಟದಲ್ಲಿ ಲಿಂಗಾನುಪಾತ 943 ಇದೆ, ಆದರೆ ಗುಜರಾತಿನಲ್ಲಿ 2011ರಲ್ಲಿ ಲಿಂಗಾನುಪಾತ 919ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ. ಪ್ರತಿ 1000 ಪುರುಷರಿಗೆ 919 ಮಹಿಳೆಯರಿದ್ದು, 2011ರ ಜನಸಂಖ್ಯಾ ಗಣತಿಯ ಪ್ರಕಾರ ಗುಜರಾತ್ 28 ರಾಜ್ಯಗಳ ಪೈಕಿ 22ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ನಗರ ಕೇಂದ್ರಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಲಿಂಗಾನುಪಾತದಲ್ಲಿ ಸುಧಾರಣೆ ಕಂಡಿದೆ. ‘ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಲಿಂಗಾನುಪಾತ 2001ರಲ್ಲಿ 945 ಇದ್ದುದು 2011ರಲ್ಲಿ 949ಕ್ಕೆ ಏರಿದೆ, ನಗರ ಪ್ರದೇಶಗಳಲ್ಲಿ ಎರಡೂ ವರ್ಷಗಳಲ್ಲಿ ಇದ್ದು 880ರಲ್ಲೇ ನಿಂತಿದೆ ಎಂದು ವರದಿ ಜನಗಣತಿ ದಾಖಲೆಗಳನ್ನು ಉಲ್ಲೇಖಿಸಿ ತಿಳಿಸಿದೆ.

Write A Comment