ನವದೆಹಲಿ: ಎರಡು ದಿನಗಳ ಹಿಂದೆ ಯಮುನಾ ಎಕ್ಸಪ್ರೆಸ್ ವೇನಲ್ಲಿ ಸಂಭವಿಸಿದ ಅಪಘಾತ ಕುರಿತ ಎಫ್ಐಆರ್ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರತ್ತ ಬೊಟ್ಟು ಮಾಡಿದೆ. ಅಪಘಾತದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬೆಂಗಾವಲು ಕಾರಿನ ಮೇಲೆ ಎಫ್ಐಆರ್ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಪಘಾತದಲ್ಲಿ ಆಗ್ರಾ ಮೂಲದ ಡಾಕ್ಟರ್ ರಮೇಶ್ ಎಂಬವರ ಬೈಕ್ಗೆ ಕಾರು ಡಿಕ್ಕಿಯಾಗಿ ಆತ ಸ್ಥಳದಲ್ಲೆ ಮೃತರಾಗಿದ್ದರು.
ಅನಾಮಿಕ ಚಾಲಕನ ಹೆಸರಿಗೆ ಎಫ್ಐಆರ್ ದಾಖಲಿಸಿರುವ ಪೊಲೀಸರು ರಸ್ತೆ ಅಪಘಾತದಲ್ಲಿ ಮೃತರಾದ ಡಾಕ್ಟರ್ ರಮೇಶನ ಸಾವಿಗೆ ಪರೋಕ್ಷವಾಗಿ ಸ್ಮೃತಿ ಇರಾನಿ ಅವರೇ ಕಾರಣ ಎಂದು ಬೊಟ್ಟು ಮಾಡಿದೆ.
‘ಇರಾನಿಯವರು ಅಪಘಾತದ ನಂತರ ನಮ್ಮನ್ನು ನಿರ್ಲಕ್ಷಿಸಿದರು, ಸರಿಯಾದ ಸಮಯಕ್ಕೆ ನಮ್ಮ ತಂದೆಯನ್ನು ಆಸ್ಪತ್ರೆಗೆ ಸೇರಿಸಿದ್ದರೆ ಅವರು ಬದುಕುತ್ತಿದ್ದರು’ ಎಂದು ಬೈಕ್ನಲ್ಲಿ ಇದ್ದ ರಮೇಶ್ ಪುತ್ರಿ ಸಂದಿಲಿ ನಗರ್ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಇರಾನಿ ಅಪಘಾತ ತನಿಖೆಗೆ ಯಾವ ರೀತಿಯ ಸಹಕಾರ ಬೇಕಾದರೂ ನೀಡಲು ಸಿದ್ಧ ಎಂದಿದ್ದಾರೆ. ಅಪಘಾತದಲ್ಲಿ ಸಣ್ಣ ಪುಟ್ಟ ಗಾಯವಾಗಿದ್ದ ಇರಾನಿಯವರು ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುವವರೆಗೂ ಸ್ಥಳದಲ್ಲಿದ್ದೆ ಎಂದು ಹೇಳಿದ್ದಾರೆ.