ರಾಷ್ಟ್ರೀಯ

ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಉತ್ತರವನ್ನು ಎಸ್ಸೆಮ್ಮೆಸ್ ಮಾಡಿದ ಶಿಕ್ಷಕರು ಅರೆಸ್ಟ್

Pinterest LinkedIn Tumblr

arrested

ಒಡಿಶಾ: ಇಲ್ಲಿನ ಗಂಜಾಮ್ ಜಿಲ್ಲೆಯಲ್ಲಿ ಮೆಟ್ರಿಕ್ ಪರೀಕ್ಷೆ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿಗೆ ಉತ್ತರವನ್ನು ಎಸ್ಸೆಮ್ಮೆಸ್ ಕಳಿಸಿದ ಮೂವರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಸಂತೋಷ್‌ಪುರ್ ಪಂಚಾಯತ್ ಹೈಸ್ಕೂಲ್‌ವ ಮುಖ್ಯೋಪಧ್ಯಾಯರಾದ ರಾಮ ಚಂದ್ರ ಪೊಲಾಯಿ, ಬನ್ಸೀದಾರ ಬಿಸ್ವಾಲ್ (ಭಾರತೀ ವಿದ್ಯಾಪೀಠದ ಶಿಕ್ಷಕ) ಮತ್ತು ಪಿ.ನಭಾ ಪಾತ್ರ (ಗಂಜಂ ಪ್ರೈಮರಿ ಸ್ಕೂಲ್, ರೌಲಿ ಬಂಧ) ವಿರುದ್ಧ ಕೇಸು ದಾಖಲಿಸಿದ ಪೊಲೀಸರು ಈ ಮೂವರನ್ನು ಭಾನುವಾರ ಬಂಧಿಸಿದ್ದಾರೆ.

ಫೆ. 29ರಂದು ಭಾರತೀ ವಿದ್ಯಾಪೀಠದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಯೊಬ್ಬ20 ನಿಮಿಷ ತಡವಾಗಿ ಬಂದಿದ್ದನು. ಪರೀಕ್ಷಕರು ಆತನನ್ನು ತಪಾಸಣೆಗೊಳಪಡಿಸಿದಾಗ ಆ ವಿದ್ಯಾರ್ಥಿಯ ಬಳಿ ಮೊಬೈಲ್ ಫೋನ್ ಇತ್ತು. ಅದನ್ನು ಪರಿಶೀಲಿಸಿದಾಗ ಕೆಲವೊಂದು ಮಿಸ್ಡ್ ಕಾಲ್ ಮತ್ತು ಎಸ್ಸೆಮ್ಮೆಸ್‌ಗಳು ಕಂಡು ಬಂದಿತ್ತು. ಈ ಶಿಕ್ಷಕರು ವಿದ್ಯಾರ್ಥಿಗೆ ಎಸ್ಸೆಮ್ಮೆಸ್ ಮೂಲಕ ಉತ್ತರವನ್ನು ಕಳುಹಿಸಿ ಕೊಟ್ಟಿದ್ದರು.

ವಿದ್ಯಾರ್ಥಿಗೆ ನಕಲು ಹೊಡೆಯಲು ಸಹಾಯ ಮಾಡಿದ ಈ ಶಿಕ್ಷಕರ ವಿರುದ್ಧ ಒಡಿಶಾ ಪರೀಕ್ಷೆ ನೀತಿ ಸಂಹಿತೆ ಕಾಯ್ದೆ 1988ರ ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ಗಂಜಂ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ರಾಮಕಾಂತ ಮಹಾಲಿಕ್ ಹೇಳಿದ್ದಾರೆ.

Write A Comment