ರಾಷ್ಟ್ರೀಯ

ಶ್ರೀಲಂಕಾ ಪಡೆಯಿಂದ ತಮಿಳು ನಾಡಿನ 31 ಮೀನುಗಾರರ ಬಂಧನ

Pinterest LinkedIn Tumblr

shrilanka_webರಾಮೇಶ್ವರಂ: ತಮಿಳುನಾಡಿನ 31 ಮೀನುಗಾರರನ್ನು ಗಡಿ ಉಲ್ಲಂಘನೆ ಆರೋಪದಲ್ಲಿ ಶ್ರೀಲಂಕಾ ನೌಕಾ ಪಡೆ ಗಸ್ತು ಸಿಬ್ಬಂದಿ ಬಂಧಿಸಿದ್ದಾರೆ ಎಂದು ತಮಿಳುನಾಡು ಮೀನುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರ ಮುಂಜಾನೆ ತೂತುಕುಡಿಯ 12 ಮಂದಿ ಹಾಗೂ ರಾಮೇಶ್ವರಂನ 9 ಜನ ಮೀನುಗಾರರನ್ನು ದೋಣಿ ಸಮೇತ ವಶಕ್ಕೆ ಪಡೆದಿದ್ದಾರೆ. ಮಾರ್ಚ್ 3 ರಂದು ಅಂತಾರಾಷ್ಟ್ರೀಯ ಗಡಿರೇಖೆ ಉಲ್ಲಂಘನೆ ಮೇಲೆ 8 ಮಂದಿಯನ್ನು ಬಂಧಿಸಲಾಗಿತ್ತು . ಒಟ್ಟು 66 ಮೀನುಗಾರರನ್ನು ಈವರಗೆ ಬಂಧಿಸಲಾಗಿದೆ.

ಮೀನುಗಾರರ ಹಾಗೂ ದೋಣಿಗಳ ಬಿಡುಗಡೆ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕೋರಿದ್ದಾರೆ. ಶ್ರೀಲಂಕಾ ಭಾಗದ ನೀರಿನಲ್ಲಿ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ನಿಷೇಧಿತ ಮೀನಿನ ಬಲೆ ಉಪಯೋಗಿಸಿದ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾ ಪಡೆ ಸಿಬ್ಬಂದಿ ಹೇಳಿದ್ದಾರೆ.

Write A Comment