ರಾಷ್ಟ್ರೀಯ

ಜೆಎನ್​ಯುು ಪ್ರಕರಣ, ಎರಡು ವಿಡಿಯೋ ತುಣುಕು ನಕಲಿ ಸೃಷ್ಟಿ

Pinterest LinkedIn Tumblr

jnu-webನವದೆಹಲಿ: ಜೆಎನ್​ಯುು ವಿವಾದದ ಸಾಕ್ಷ್ಯಾಧಾರ ಎಂದು ಪರಿಗಣಿಸಲಾದ ವಿಡಿಯೋ ತುಣುಕಿನಲ್ಲಿ ಎರಡು ವಿಡಿಯೋ ನಕಲಿ ಸೃಷ್ಟಿ ಎಂದು ವಿಧಿವಿಜ್ಞಾನ ಮೂಲಗಳು ತಿಳಿಸಿವೆ.

ದೆಹಲಿ ಸರ್ಕಾರ ಒಟ್ಟು ಏಳು ವಿಡಿಯೋಗಳನ್ನು ಹೈದರಾಬಾದ್ ಮೂಲದ ಟ್ರುಥ್ ಲ್ಯಾಬ್​ಗೆ ಕಳುಹಿಸಿತ್ತು. ಇದರಲ್ಲಿ ಎರಡು ವಿಡಿಯೋದ ದೃಶ್ಯ ಹಾಗೂ ಧ್ವನಿಯನ್ನು ಎಡಿಟ್ ಮಾಡಲಾಗಿದ್ದು, ಪರಸ್ಪರ ಹೊಂದಾಣಿಕೆ ಕಾಣಿಸುವುದಿಲ್ಲ ಎಂದು ಲ್ಯಾಬ್ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರುವರಿ 9ರಂದು ಜವಾಹಾರ್​ಲಾಲ್ ನೆಹರು ವಿವಿಯಲ್ಲಿ ರಾಷ್ಟ್ರವಿರೋಧಿ ಘೊಷಣೆ ಕೂಗಿದ ಆರೋಪದ ಮೇಲೆ ವಿದ್ಯಾರ್ಥಿ ಮುಂಖಂಡ ಕನ್ಹಯ್ಯಾ ಕುಮಾರ್​ನನ್ನು ಬಂಧಿಸಲಾಗಿದ್ದು, ಈ ಪ್ರಕರಣದ ನ್ಯಾಯಾಂಗ ತನಿಖೆಗೆ ದೆಹಲಿಯ ಕೇಜ್ರಿವಾಲ್ ಸರ್ಕಾರ ಫೆ 13ರಂದು ಆದೇಶ ನೀಡಿತ್ತು. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ವಿಡಿಯೋ ಆಧರಿಸಿ ಕನ್ಹಯ್ಯಾ ಕುಮಾರ ಅವರನ್ನುಬಂಧಿಸಲಾಗಿತ್ತು.

Write A Comment