ಮುಂಬೈ

ಬಡ್ಡಿ ದರ ಕಡಿತ ನಿರೀಕ್ಷೆ; ಬಿಎಸ್‌ಇ 431 ಅಂಶ ಏರಿಕೆ: 24 ಸಾವಿರದ ಗಡಿ ದಾಟಿದ ಸೂಚ್ಯಂಕ

Pinterest LinkedIn Tumblr

BSEWEBಮುಂಬೈ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಿನ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರ ತಗ್ಗಿಸಬಹುದು ಎಂಬ ವಿಶ್ಲೇಷಣೆಗಳಿಂದ  ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬುಧವಾರ ಬೆಳಗಿನ ವಹಿವಾಟಿನಲ್ಲಿ 431 ಅಂಶಗಳಷ್ಟು ಏರಿಕೆ ಕಂಡಿದ್ದು 24 ಸಾವಿರದ ಗಡಿ ದಾಟಿದೆ.

ಚಾಲ್ತಿ ಖಾತೆ ಕೊರತೆ ತಗ್ಗಿಸಲು ಮತ್ತು ಸಬ್ಸಿಡಿ ಕಡಿತಕ್ಕೆ ಬಜೆಟ್‌ನಲ್ಲಿ ಕ್ರಮ ಕೈಗೊಂಡಿರುವುದು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ. ಇದರಿಂದ ಕಳೆದ ಎರಡು ದಿನಗಳಿಂದ ಪೇಟೆಯಲ್ಲಿ ಚುರುಕಿನ ವಹಿವಾಟು ಕಂಡುಬಂದಿದೆ.  ಡಾಲರ್‌ ವಿರುದ್ಧ ರೂಪಾಯಿ ಕೂಡ ಸ್ಥಿರಗೊಂಡಿದೆ. ಈ ಎಲ್ಲ ಸಕಾರಾತ್ಮಕ ಬೆಳವಣಿಗೆಗಳಿಂದ ಕಳೆದ ಎರಡು ವಹಿವಾಟುಗಳಲ್ಲಿ  ಸೂಚ್ಯಂಕ 1,200 ಅಂಶಗಳಷ್ಟು ಚೇತರಿಕೆ ಕಂಡಿದೆ.

ಬ್ಯಾಂಕಿಂಗ್‌, ಕೇಂದ್ರೋದ್ಯಮ ಸಂಸ್ಥೆಗಳು, ರಿಯಲ್ ಎಸ್ಟೇಟ್‌ ವಲಯದ ಷೇರುಗಳು ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಟ್ಟಿವೆ.
ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 129 ಅಂಶಗಳಷ್ಟು ಏರಿಕೆ ಕಂಡಿದ್ದು, ಸದ್ಯ 7,351 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.

Write A Comment