ಅಂತರಾಷ್ಟ್ರೀಯ

ಭಾರತದ ನಂ.1 ಶ್ರೀಮಂತ ಸ್ಥಾನ ಕಾಯ್ದುಕೊಂಡ ಮುಖೇಶ್ ಅಂಬಾನಿ: ವಿಶ್ವದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದ ಬಿಲ್ ಗೇಟ್ಸ್

Pinterest LinkedIn Tumblr

mukesh-ambani-webವಾಷಿಂಗ್ಟನ್: ಪೋರ್ಬ್ಸ್ ನಿಯತಕಾಲಿಕೆ 2016ರ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ 84 ಮಂದಿ ಸ್ಥಾನ ಪಡೆದಿದ್ದು, ಭಾರತದ ಕೋಟ್ಯಧಿಪತಿಗಳಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎಂದಿನಂತೆ ಬಿಲ್​ಗೇಟ್ಸ್ (75 ಬಿಲಿಯನ್ ಡಾಲರ್) ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ಭಾರತದ ನಂ 1 ಶ್ರೀಮಂತ ಮುಖೇಶ್ ಅಂಬಾನಿ (19.3ಬಿಲಿಯನ್ ಡಾಲರ್) ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 36ನೇ ಸ್ಥಾನ ಗಳಿಸಿದ್ದಾರೆ.

ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಅಮೆರಿಕದ 540 ಮಂದಿ ಸ್ಥಾನ ಪಡೆದರೆ, ಚೀನಾ 251, ಜರ್ಮನಿಯ 120 ಉದ್ಯಮಿಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

Write A Comment