ರಾಷ್ಟ್ರೀಯ

ಬಜೆಟ್‌: ಆರ್ಥಿಕ ಪ್ರಗತಿಗೆ 9 ಆಧಾರ ಸ್ತಂಭಗಳು

Pinterest LinkedIn Tumblr

JETLYBudgetfiನವದೆಹಲಿ (ಪಿಟಿಐ): ಕೃಷಿ, ಗ್ರಾಮೀಣ ಮೂಲಸೌಕರ್ಯ ವೃದ್ಧಿ, ಸಾಮಾಜಿಕ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಕೌಶಲ ವೃದ್ಧಿ, ಉದ್ಯೋಗಾವಕಾಶ ಸೃಷ್ಟಿ, ಉದ್ಯಮ ಸ್ನೇಹಿ ನೀತಿ, ಆರ್ಥಿಕ ಶಿಸ್ತು, ತೆರಿಗೆ ಸುಧಾರಣೆ ಮತ್ತು ದೇಶವನ್ನು ಜ್ಞಾನದ ಕೇಂದ್ರವಾಗಿ ರೂಪಿಸುವುದು ಇವು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ದೇಶದ ಪ್ರಗತಿಗೆ ಸೂಚಿಸಿದ 9 ಆಧಾರ ಸ್ತಂಭಗಳು.

ಜಾಗತಿಕ ಆರ್ಥಿಕತೆಗಿಂತಲೂ ಭಾರತದ ಅರ್ಥ ವ್ಯವಸ್ಥೆ ಹೆಚ್ಚು ಸ್ಥಿರವಾಗಿದೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಹೊರೆಯು (ಸಿಎಡಿ) ಒಟ್ಟಾರೆ ಆಂತರಿಕ ಉತ್ಪಾದನೆಯ ಶೇ 1.4ಕ್ಕೆ ತಗ್ಗಲಿದೆ. ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹೆಚ್ಚಿನ ಬಂಡವಾಳ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದರು.

7ನೇ ವೇತನ ಆಯೋಗ ಮತ್ತು ಒಂದೇ ಶ್ರೇಣಿ ಒಂದೇ ಪಿಂಚಣಿ ಯೋಜನೆ ಜಾರಿಯಿಂದ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಆರ್ಥಿಕ ಹೊರೆ ಸರ್ಕಾರದ ಮೇಲೆ ಬೀಳಲಿದೆ ಎಂದೂ ಅವರು ಹೇಳಿದರು.

ರೈತರಿಗೆ ಮಣ್ಣು ಆರೋಗ್ಯ ಪರಿಶೀಲಿಸಲು ‘ಸಾಯಿಲ್‌ ಹೆಲ್ತ್‌ ಕಾರ್ಡ್‌’ ನೀಡಲಾಗುವುದು, ಪ್ರಧಾನಿ ಫೈಸಲ್‌ ಭೀಮಾ ಯೋಜನೆಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

Write A Comment