ರಾಷ್ಟ್ರೀಯ

ಮದುವೆ ಮುನ್ನಾ ದಿನ ಬೇರೆ ವ್ಯಕ್ತಿ ಜತೆ ಸೆಕ್ಸ್‌:ಮಗಳನ್ನು ಕೊಂದ ತಾಯಿ

Pinterest LinkedIn Tumblr

Murder-700ಹೊಸದಿಲ್ಲಿ : ಮದುವೆಯ ಮುನ್ನಾ ದಿನ ತನ್ನ ಮಗಳು ತನ್ನದೇ ಕಟ್ಟಡದ ಬಾಡಿಗೆದಾರನೊಂದಿಗೆ ಮನೆಯ ಕೋಣೆಯಲ್ಲಿ ಸೆಕ್ಸ್‌ ನಡೆಸುತ್ತಿದ್ದುದನ್ನು ಕಂಡು ವ್ಯಗ್ರಳಾದ ತಾಯಿ, ಮಗಳನ್ನು ಉಸಿರುಗಟ್ಟಿಸಿ ಸಾಯಿಸಿದ ಘಟನೆ ಈಶಾನ್ಯ ದಿಲ್ಲಿಯಲ್ಲಿ ನಡೆದಿದೆ.

ಭಾನುವಾರ ರಾತ್ರಿ ತಾಯಿ ಮನೆಗೆ ಮರಳಿದಾಗ ಮಗಳು ಕೋಣೆಯಲ್ಲಿ ತನ್ನ ಬಾಡಿಗೆದಾರ ವ್ಯಕ್ತಿಯೊಂದಿಗೆ ಹಾಸಿಗೆಯಲ್ಲಿ ಇದ್ದುದನ್ನು ಕಂಡಳು. ಇವರಿಬ್ಬರು ಸೆಕ್ಸ್‌ ನಡೆಸುತ್ತಿದ್ದುದನ್ನು ಕಂಡೊಡನೆಯೇ ಆಕೆಯ ಸಿಟ್ಟು ನೆತ್ತಿಗೇರಿತು. ಅಷ್ಟರೊಳಗೆ ಆ ವ್ಯಕ್ತಿ ಅಲ್ಲಿಂದ ಓಡಿ ಹೋದ.

ಸಿಟ್ಟಿನ ಆವೇಶದಲ್ಲಿ ಮಗಳನ್ನು ಕೊಂದೇ ತೀರಲು ಮುಂದಾದ ತಾಯಿ, ಹಾಸಿಗೆಯ ಮೇಲಿದ್ದ ದಿಂಬನ್ನೇ ಎತ್ತಿಕೊಂಡು ಮಗಳ ಮುಖಕ್ಕೆ ಅದನ್ನು ಗಟ್ಟಿಯಾಗಿ ಒತ್ತಿ ಆಕೆ ಉಸಿರುಗಟ್ಟಿ ಸಾಯುವಂತೆ ಮಾಡಿದಳು.

ಮರುದಿನವೇ ಮಗಳ ಮದುವೆ ನಡೆಯುವುದಿತ್ತು. ಮನೆ ತುಂಬ ಅತಿಥಿಗಳಿದ್ದರು. “ಮಗಳಿಗೆ ಹೃದಯಾಘಾತವಾಗಿದೆ; ಅವಳನ್ನು ಆಸ್ಪತ್ರೆಗೆ ಒಯ್ಯಬೇಕಾಗಿದೆ’ ಎಂದು ಮನೆಯಲ್ಲಿ ಅತಿಥಿಗಳಿಗೆ ಹೇಳುತ್ತಲೇ ಆಕೆ ಆಸ್ಪತ್ರೆಯಿಂದ ಅಂಬುಲೆನ್ಸ್‌ ತರಿಸಿಕೊಂಡಳು. ಅದೇ ವೇಳೆ ತನ್ನ ಮಗನಿಗೂ ಫೋನ್‌ ಮಾಡಿ ಕರೆಸಿಕೊಂಡು ಆತನಿಗೆ ನಡೆದ ವಿಷಯವನ್ನು ಪೂರ್ತಿಯಾಗಿ ತಿಳಿಸಿದಳು.

“ಮಗಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಳು’ ಎಂದು ಲೋಕ ನಾಯಕ ಆಸ್ಪತ್ರೆಯ ವೈದ್ಯರಲ್ಲಿ ತಾಯಿ ಹೇಳಿದಳು. ಆದರೆ ಪರೀಕ್ಷೆ ನಡೆಸಿದ ವೈದ್ಯರಿಗೆ ಹುಡುಗಿಯು ಅದಾಗಲೇ ಸತ್ತಿರುವುದು ಗೊತ್ತಾಯಿತು. ಇದೊಂದು ಅನುಮಾನಾಸ್ಪದ ಸಾವಿನ ಪ್ರಕರಣವೆಂದು ಅವರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ತನಿಖೆ ನಡೆಸಿ ಎಫ್ಐಆರ್‌ ದಾಖಲಿಸಿಕೊಂಡು ತಾಯಿ ಮತ್ತು ಮಗನನ್ನು ಬಂಧಿಸಿ ಅವರ ವಿರುದ್ಧ ಕೊಲೆ ಕೇಸನ್ನು ದಾಖಲಿಸಿಕೊಂಡರು.

ಹುಡುಗಿಗೆ ಬಾಡಿಗೆದಾರ ವ್ಯಕ್ತಿಯೊಂದಿಗೆ ಈ ಮೊದಲೇ ದೈಹಿಕ ಸಂಪರ್ಕವಿತ್ತು. ಹಿಂದೆಯೂ ಇದನ್ನು ತಾಯಿ ವಿರೋಧಿಸಿದ್ದಳು. ಮೀರತ್‌ ಮೂಲದ ಈ ಕುಟುಂಬ ಗಾಜಿಯಾಬಾದ್‌ನ ಉದ್ಯಮಿಯೊಂದಿಗೆ ಮಗಳ ಮದುವೆಯನ್ನು ಗೊತ್ತುಪಡಿಸಿಕೊಂಡಿತ್ತು.

ಹುಡುಗಿಯ ತಂದೆ ಈಚೆಗೆ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅದಾಗಿ ಆತನ ಮಗ ಸ್ಥಳೀಯ ಕಾರ್ಖಾನೆಯಲ್ಲಿ ಇಲೆಕ್ಟ್ರೀಶಿಯನ್‌ ಆಗಿ ಕೆಲಸಕ್ಕೆ ತೊಡಿಕೊಂಡಿದ್ದ.
-ಉದಯವಾಣಿ

Write A Comment